ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡದಂತೆ ಹೈಕಮಾಂಡ್ ತಿಳಿಸಿದೆ: ಶಾಸಕ ಸತೀಶ್
- 17 Dec 2023 , 10:05 PM
- Belagavi
- 89
ಬೆಳಗಾವಿ: " ಕಾಂಗ್ರೆಸ್‌ನಲ್ಲಿ ಎಷ್ಟೇ ಪ್ರಭಾವಿ ನಾಯಕರಿದ್ದರೂ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕಮಾಂಡ ಸಂದೇಶ ನೀಡಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಪಾದಯಾತ್ರೆ ನಡೆದಿದೆ. ಇದೇ 9 ರಂದು ಕಾಂಗ್ರೆಸ್ ಭವನದಲ್ಲಿ ಸಮಾರೋಪ ಸಮಾವೇಶ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವಿಧಾನ ಸಭೆಯ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಅಧ್ಯಕ್ಷರ ಸಮ್ಮುಖ, ಕಾಂಗ್ರೆಸ್ ನಿಂದ ಬಿಜೆಪಿ ಶಾಸಕರಿಗೆ ಗೌನ್ ಉಡುಗೊರೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಮೇಕೆದಾಟು ಯೋಜನೆ ಈಗಾಗಲೇ ಅರ್ಧದಷ್ಟು ಮುಗದಿದೆ. ಸರ್ಕಾರ ವಿಳಂಬ ನೀತಿ ಸರಿಯಲ್ಲ, ಅನಿರ್ವಾಯತೆ ಎದುರಾದರೆ ರಾಜ್ಯದ ಜನತೆಗಾಗಿ ಮತ್ತೆ ಪಾದಯಾತ್ರೆ ಮಾಡಿ ಸರ್ಕಾರ ಗಮನ ಸೆಳೆಯಲಾಗುವುದು. ನವೆಂಬರ್ ಮತ್ತೆ ಪಾದಯಾತ್ರೆ ಮಾಡುವ ಸಾಧ್ಯತೆ ಇದೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಜವಾಬ್ದಾರಿಯುತ್ತವಾಗಿ ನಿವಾಯಿಸಿದ್ದೆವೆ ಅದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ.
ಪಕ್ಷದ ನಾಯಕನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ ಅದರಲ್ಲಿ ಏನು ಮುಚ್ಚು ಮರೇ ಇಲ್ಲ, ಮಾದ್ಯಮಗಳಲ್ಲಿ ಬೇರೆ ರೀತಿ ವೈರಲ್ ಆಗಿದೆ ಎಂದು ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿದರು.
ಹೈಕಮಾಂಡ ನಾಯಕರ ಜತೆ ಮುಂದಿನ ಚುನಾವಣೆ ಬಗ್ಗೆ ಸ್ವಲ್ಪ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಪ್ರಭಾವ ನಾಯಕರು ಜನಪರ ನಾಯಕರೂ ಹೌದು, ಹೀಗಾಗಿ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ, ಇದರಲ್ಲಿ ಶೇ 90 ರಷ್ಟು ಸಿದ್ದರಾಮಯ್ಯನವರ ಅಭಿಮಾನಿಗಳು ಭಾಗಿಯಾಗಿದ್ದರು.
ಯಮಕನಮರಡಿ ಮತಕ್ಷೇತ್ರದಲ್ಲಿ ಸಚಿವ ಉಮೇಶ ಕತ್ತಿ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಉಸ್ತುವಾರಿ ಕೊಟ್ಟಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನ ಸಭಾ ಚುನಾವಣೆ ಇನ್ನೂ 7-8 ತಿಂಗಳೂ ಬಾಕಿ ಇದೆ. ಯಮಕನಮರಡಿ ಕ್ಷೇತ್ರದ ಮೇಲೆ ಹದ್ದಿನ ಕಣ್ಣು ಇದೆ, ಪೈಟ್ ಮಾಡಲಿ ನಾವು ಸಜ್ಜಾಗಿದ್ದೆವೆ ಎಂದು ಬಿಜೆಪಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದರು.
ಬಿಜೆಪಿಗೆತಿವಿದಸತೀಶಜಾರಕಿಹೊಳಿ:
ಫಿರೋಜ್ ಸೇಠ್ ಹಾಗೂ ಸತೀಶ ಜಾರಕಿಹೊಳಿ ವೈಮನಸ್ಸಿನ ಪ್ರಶ್ನೆಗೆ ಉತ್ತರಿಸಿದ ಅವರು, ಅಸಮಾಧಾನ ಸರ್ವೇ ಸಾಮಾನ್ಯ ಚುನಾವಣೆ ಬರಲಿ ಇವಾಗ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಬೆಲೆ ಏರಿಕೆಬಗ್ಗೆ ಬಿಜೆಪಿಗರು ಮಾತು ಕೇಳುತ್ತಿಲ್ಲ ಚಿರತೆ ಮಾತನಾದರೂ ಕೇಳಯತ್ತಾರೆ ಎಂದು ಬಿಜೆಪಿಗೆ ತಿವಿದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾಲವಗಟ್ಟಿ, ಸುನೀಲ ಹನ್ನಮ್ಮನವರ, ಸಿದ್ದಿಕ್ ಅಂಕಲಗಿ, ಮಂಜು ಕಾಂಬಳೆ ಹಾಗೂ ಇತರರು ಇದ್ದರು.










