ಅಯೋದ್ಯೆಗೆ ಹೋದರೆ ಮಾತ್ರ ಹಿಂದುತ್ವಾನಾ:ಸತೀಶ ಜಾರಕಿಹೊಳಿ ಪ್ರಶ್ನೆ
- krishna shinde
- 20 Jan 2024 , 1:41 PM
- Belagavi
- 629
ಬೆಳಗಾವಿ: ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಹೊಸ ಹೊಸ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಜಾರಕಿಹೊಳಿ ಅವರು ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾರಕಿಹೊಳಿ , "ಆಪರೇಷನ್ ಹಸ್ತ" ಕಾರ್ಯಾಚರಣೆಯನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿಲ್ಲ ಎಂದು ತಿಳಿಸಿದರು. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರಲು ಬಯಸುವವರನ್ನು ಬರಮಾಡಿಗೊಳ್ಳುತ್ತೇವೆ ಎಂದು ಅವರು ಹೇಳಿದರು.

ರಾಮ ಮಂದಿರದ ಪ್ರತಿಷ್ಠಾಪನೆ ಬಗ್ಗೆ ಮಾತನಾಡಿದ ಜಾರಕಿಹೊಳಿ ಜನೆವರಿ 22 ರಜಾವನ್ನು ಸರ್ಕಾರ ನಿರ್ಧರಿಸುತ್ತದೆ ಎಂದೂ ಜಾರಕಿಹೊಳಿ ಹೇಳಿದರು. ಅಯೋದ್ಯೆಗೆ ಹೋದರೆ ಮಾತ್ರ ಹಿಂದುತ್ವಾನಾ ಎಂದು ಜಾರಕಿಹೊಳಿ ಪ್ರಶ್ನೆ ಮಾಡಿದ್ದಾರೆ.
ರಾಮ ಮಂದಿರದ ತರಾತುರಿ ಉದ್ಘಾಟನೆಗೆ ಶಂಕ್ರಾಚಾರ್ಯರು ಕಿಡಿ ಕಾರಿದ್ದಾರೆ. ಈ ಬಗ್ಗೆ ಜಾರಕಿಹೊಳಿ ಅವರು, "ಶಂಕ್ರಾಚಾರ್ಯರ ಮಾತಿಗೆ ಬಿಜೆಪಿಯವರು ಉತ್ತರಿಸಬೇಕು" ಎಂದು ಹೇಳಿದರು.
2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 28 ಕ್ಷೇತ್ರಗಳಲ್ಲಿ 28 ಸ್ಪರ್ಧಿಗಳನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತದೆ ಎಂದು ಜಾರಕಿಹೊಳಿ ಹೇಳಿದರು.










