ಚಿರತೆ ಸೆರೆ ಹಿಡಿಯಲು ಹನಿಟ್ರ್ಯಾಪ್...?

ಬೆಳಗಾವಿ: ಬೆಳಗಾವಿ ನಗರದ ಗಾಲ್ಫ್ ಮೈದಾನದಲ್ಲಿರುವ ಚಿರತೆ ಸೆರೆ ಹಿಡಿಯಲು ಹೆಣ್ಣು‌ ಚಿರತೆಯ ಮೂತ್ರ ಸಿಂಪಡಿಸಿ ಚಿರತೆ‌ ಸೆರೆ ಹಿಡಿಯಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ ಹೇಳಿದರು.

promotions

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.5 ಕ್ಕೆ ಜಾಧವ ನಗರದಲ್ಲಿ ಚಿರತೆ ಕಾಣಿಸಿಕೊಂಡಾಗ ಚಿರತೆ ಕುರುಹು ಕಂಡಿರಲಿಲ್ಲ. ಮತ್ತೇ ಪ್ರತ್ಯೇಕವಾಗಿರುವುದರಿಂದ ಚಿರತೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಚಿರತೆ ವಿಶಾಲವಾದ ಪ್ರದೇಶದಲ್ಲಿರುವುದರಿಂದ ಅದು ಸ್ಥಳ ಬದಾಲಾವಣೆ ಮಾಡುತ್ತಿದೆ ಎಂದರು‌.

promotions

ಪ್ರದೇಶವನ್ನು ಬ್ಲಾಕ್ ಮಾಡಲಾಗುತ್ತಿದೆ. ಚಿರತೆ ಗಂಡೋ‌ ಹೆಣ್ಣೋ ಎಂಬುದು ತಿಳಿದು ಬಂದಿಲ್ಲ. ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾದ ಚಿತ್ರದ ಆಧಾರದ ಮೇಲೆ ಗಂಡು‌ ಚಿರತೆ ಇರಬಹುದು ಎಂದು ಭೂತರಾಮನಟ್ಟಿಯ ಕಿರು ಮೃಗಾಲಯದಿಂದ ಹೆಣ್ಣು ಚಿರತೆಯ ಮುತ್ರ ಸಿಂಪಡಿಸಿ‌ ಚಿರತೆ ಸೆರೆ ಹಿಡಿಯಲಾಗುವುದು ಎಂದರು.

Read More Articles