ಭಕ್ತರನ್ನು ಅಗಲಿದ ಜ್ನಾನಯೋಗಿ ತೀವ್ರ ಶೋಕ ವ್ಯಕ್ತಪಡಿಸಿದ ಹುಕ್ಕೇರಿ ಶ್ರೀ
- 14 Jan 2024 , 9:16 PM
- Belagavi
- 125
ಬೆಳಗಾವಿ :ರಾಷ್ಟ್ರೀಯ ಸಂತ ತಮ್ಮ ಪ್ರವಚನದ ಮೂಲಕ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದರು ವಿಜಯಪುರದಿಂದ ಇಡಿ ದೇಶದ ತುಂಬಾ ಖ್ಯಾತರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತೀವ ದುಃಖ ವಾಗುತ್ತಿದೆ,ಇ ವಿಷಯವನ್ನು ಮನಸ್ಸು ಒಪ್ಪುತ್ತಿಲ್ಲ , ನಿನ್ನೆ ಬೆಳಿಗ್ಗೆಯಷ್ಟೆ ಹುಕ್ಕೇರಿ ಹಿರೇಮಠದಲ್ಲಿ ಮಹಾ ಮೃತ್ಯುಂಜಯ ಸ್ವಾಮಿಯ ಜಪ ಹಾಗೂ ಹೋಮ ಮಾಡಿ ನಡೆದಾಡುವ ದೇವರನ್ನು ಶತಾಯುಷಿಗಳಾಗಿ ಮಾಡು ಎಂದು ಪಾರ್ಥಿಸಿದ್ದೆವು.

ಕೊನೆಗೂ ಭಗವಂತ ನಮ್ಮ ದೇವರನ್ನು ತನ್ನ ಬಳಿಗೆ ಕರೆದುಕೊಂಡು ಬಿಟ್ಟನು ಶ್ರೀ ಗಳ ಆತ್ಮಕ್ಕೆ ಶ್ರೀ ಗುರುಶಾಂತೇಶ್ವರರು ಚಿರಶಾಂತಿಯನ್ನು ನೀಡಲಿ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶೋಕ ವ್ಯಕ್ತಪಡಿಸಿದರು.











