ಹುಕ್ಕೇರಿಶನ ಮುಡಿಗೆ ವಿಶ್ವ ಬಸವಾಂಬೆ ಪ್ರಶಸ್ತಿ

ಬೆಳಗಾವಿ 

promotions

ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ವಿಶ್ವ ಬಸವಾಂಬೆ ಪ್ರಶಸ್ತಿ ಲಭಿಸಿದೆ.

promotions

ಗುಲಬರ್ಗಾ ಜಿಲ್ಲಾ ಶಾಖಾಪುರ ವಿಶ್ವರಾಧ್ಯ ತಪೋವನ ಶ್ರೀ ಡಾ. ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಅವರು ಪ್ರತಿ ವರ್ಷ ನೀಡಲ್ಪಡುವ ಅಂತಾರಾಷ್ಟ್ರೀಯ ವಿಶ್ವ ಬಸವಾಂಬೆ ಪ್ರಶಸ್ತಿಯನ್ನು ಏ.3 ರಂದು ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನಿದ್ಯದಲ್ಲಿ ವಿಶ್ವಾರಾಧ್ಯರ ಬಸವಾಂಬೆಯ 73ನೇ ಜಾತ್ರಾ ಮಹೋತ್ಸವದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ನೀಡಿ‌ ಗೌರವಿಸಲಿದ್ದಾರೆ.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ನಾಡು, ನುಡಿ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಗಡಿಭಾಗದಲ್ಲಿ ಅಪರೂಪದ ಕೆಲಸ ಮಾಡಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು ದೇಶಕ್ಕೆಯೇ ಮಾದರಿಯಾಗಿದ್ದು ಇತಿಹಾಸ. ಇವರಿಗೆ ಪ್ರಶಸ್ತಿ ಲಭಿಸಿರುವುದು ಸಂತೋಷ. ಈಗಾಗಲೇ ಶ್ರೀಗಳಿಗೆ ರಾಜ್ಯ, ಅಂತಾರಾಜ್ಯ, ಹೊರದೇಶದಲ್ಲಿಯೂ ಕೂಡ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಡಾ. ಹಂಸಲೇಖ ಅವರು ತಮ್ಮ ಅಭಿಪ್ರಾಯ ತಿಳಿಸಿದರು.

Read More Articles