ಸಚಿವ ಸತೀಶ್ ಜಾರಕಿಹೊಳಿ ಮಾತಿನಿಂದ ನೋವಾಗಿದೆ: ಸವದಿ ಬೆಂಬಲಿಗರು ಅಸಮಾಧಾನ

ಅಥಣಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಫಲಿತಾಂಶ ನಂತರ ಸಚಿವ ಸತೀಶ್ ಜಾರಕಿಹೊಳಿ ಅವರು ಅಥಣಿ ವಲಸಿಗ ಬಿಜೆಪಿಗರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ ಈ ಆಪಾದನೆ ನಮಗೆ ಆಘಾತವಾಗಿದೆ ಈ ಮಾತನ್ನು ಸಚಿವ ಸತೀಶ್ ಜಾರಕಿಹೊಳಿ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಎಂದು ಮೂಲ ಕಾಂಗ್ರೆಸ್ ಕಾರ್ಯಕರ್ತರ ಶಿವಾನಂದ ಗುಡ್ಡಾಪುರ ಆಗ್ರಹಿಸಿದರು ‌.

Your Image Ad

ಅವರು ಶನಿವಾರ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಾ, ಫಲಿತಾಂಶ ನಂತರ ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ಅವರು ಲಕ್ಷ್ಮಣ್ ಸವದಿ ಜೊತೆ ಬಂದಿರಿವ ಬಿಜೆಪಿ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡಿಲ್ಲ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ, ಈ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ, ಇದರಿಂದ ಸಚಿವ ಸತೀಶ್ ಜಾರಕಿಹೊಳಿ ಈ ಮಾತನ್ನು ಹಿಂದಕ್ಕೆ ಪಡೆಯಬೇಕು, ಒಂದು ವೇಳೆ ಈ ರೀತಿ ವಲಸೆ ಬಿಜೆಪಿಗರು ಬಿಜೆಪಿ ಪರವಾಗಿ ಕೆಲಸ ಮಾಡಿದರೆ ಸುಮಾರು ಐವತ್ತು ಸಾವಿರ ಮತಗಳ ಬಿಜೆಪಿ ಪಕ್ಷ ಲಿಟ್ ಆಗುತಿತ್ತು , ಸಚಿವ ಸತೀಶ್ ಜಾರಕಿಹೊಳಿ ಸ್ಥಳಿಯ ಶಾಸಕ ಲಕ್ಷ್ಮಣ್ ಸವದಿ ಅವರನ್ನು ವಿಶ್ವಾಸಕ್ಕೆ ತೇಗೆದುಕೊಳ್ಳುವ ಕೆಲಸವನ್ನು ಮಾಡಲಿಲ್ಲ, ಸಚಿವರು ತಮ್ಮ ಕಾರ್ಖಾನೆ ಸಿಬ್ಬಂದಿಗಳನ್ನು ಕರೆತಂದು ಪ್ರತಿ ಗ್ರಾಮದಲ್ಲಿ ಚುನಾವಣೆ ಕೆಲಸವನ್ನು ಮಾಡಿಸಿದ್ದಾರೆ, ಸ್ಥಳಿಯ ಶಾಸಕರು ಅಥಣಿಯಲ್ಲಿ ಇದ್ದರು ಮಿನಿಸ್ಟರ್ ತಾಲೂಕಿಗೆ ಬರುವುದು ಮಾಹಿತಿ ಇರುವುದಿಲ್ಲ ನೀವು ಸವದಿ ಅವರನ್ನು ವಿಶ್ವಾಸಕ್ಕೆ ತೆಗೆದುಕೋಂಡಿಲ್ಲ, ಸತೀಶ್ ಜಾರಕಿಹೊಳಿ ಅವರು ಹಾಲುಮತ ಸಮಾಜಕ್ಕೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು ನಂತರ ತಮ್ಮ ಪುತ್ರಿಯನ್ನು ಕಣಕ್ಕೆ ಇಳಿಸಿದರು, ಈ ಬಾಗದಲ್ಲಿ ಕುರುಬ ಸಮುದಾಯ ನಾಯಕರು ನಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದೆ ನಾವು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನಿಡುದಿಲ್ಲ ಎಂದಿದ್ದರು ಆದರೆ ನಾವು ಚಿದಾನಂದ ಸವದಿ ಜೊತೆಗೆ ಯಾಗಿ ಕೈಮುಗಿದು ಕ್ಷಮೆ ಕೇಳಿ ನಾವು ಕಾಂಗ್ರೆಸ್ ಪರವಾಗಿ ಮತ ನೀಡುವಂತೆ ಮನವೊಲಿಸಿಲಾದಿದೆ ಅಥಣಿ ತಾಲೂಕಿನಲ್ಲಿ ಯಾರೊಬ್ಬ ಲಿಂಗಾಯತ ಮುಖಂಡ ಜೊತೆ ಸತೀಶ್ ಜಾರಕಿಹೊಳಿ ಸಭೆ ಮಾಡ್ಲಿಲ್ಲ, ಇದರಿಂದ ಕಾಂಗ್ರೆಸ್ ಹಿನ್ನಡೆ ಸಾದ್ಯತೆ ಹೆಚ್ಚು.

Your Image Ad

ಇಲ್ಲಿ ಸಚಿವರ ಹಲವು ವೈಫಲ್ಯಗಳು ಇದ್ದಾವೆ, ಕಾಂಗ್ರೆಸ್ ಅಭ್ಯರ್ಥಿ ಈ ಬಾಗದಲ್ಲಿ ಪ್ರಚಾರಕ್ಕೆ ಬರಲಿಲ್ಲ ಆದರು ನಾವು ಹಗಲು ರಾತ್ರಿ ಎನ್ನದೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇವೆ ಸಚಿವರು ಯಾರೋ ಏನೋ ಹೇಳಿದರು ಎಂದು ವಲಸೆ ಬಂದಿರುವ ಕಾರ್ಯಕರ್ತರ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂಬುದು ನೀವು ಮನವರಿಕೆ ಮಾಡಿ, ದೊಡ್ಡ ರಾಜಕೀಯ ನಾಯಕರು ನೀವು ಎಲ್ಲವನ್ನೂ ತೀಳಿಕೊಂಡ ಮಾತನಾಡಬೇಕೆಂದು ಸಚಿವರ ವಿರುದ್ಧ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಶಿವು ಗುಡ್ಡಾಪುರ ,ಶಿವಾನಂದ ದಿವಾನಮಳ,ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಮ್.ಖೊಬ್ರಿ, ಶಿದರಾಯ ಯಲ್ಲಡಗಿ, ರಾಮನಗೌಡ ಪಾಟೀಲ, ಸಂತೋಷ ಸಾವಡಕರ, ಅಪ್ಪು ನೇಮಗೌಡ, ಮಂಜು ಹುಲಿಕಟ್ಟಿ. ಪ್ರಶಾಂತ ಅಕ್ಕೋಳ.ರಾಮನಗೌಡ ಪಾಟೀಲ, ಡಿ.ಬಿ.ಠಕ್ಕಣ್ಣವರ, ಆಸೀಫ್ ತಾಂಬೋಳಿ, ಸಿ.ಎಸ್.ನೇಮಗೌಡ, ಅನಂತ ಬಸರಿಖೋಡಿ,ಭಾಗವಹಿಸಿದರು

ವರದಿ : ರಾಹುಲ್  ಮಾದರ 

Read More Articles