ರಾತ್ರೋರಾತ್ರಿ ಚನ್ನಮ್ಮ ವೃತ್ತದಲ್ಲಿ ಹೈಡ್ರಾಮಾ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರಿಗೆ ಮೋಸ ಮಾಡಿ ಪೊಲೀಸರು ಎಂಇಎಸ್ ನವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಕನ್ನಡ ಸಂಘಟನೆ, ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ರಾತ್ರೋರಾತ್ರಿ ಚನ್ನಮ್ಮ ವೃತ್ತದಲ್ಲಿ ಹೈಡ್ರಾಮಾ ನಡೆಸಿದರು.

promotions

ರಾಜ್ಯ ಸರಕಾರ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡಿದೆ. ಆದರೆ ಬೆಳಗಾವಿ ನಗರ ಪೊಲೀಸರು ಕನ್ನಡಿಗರಿಗೆ ರಕ್ಷಣೆ ನೀಡುವ ಬದಲು ಎಂಇಎಸ್ ಗೆ ಸಹಕಾರ ನೀಡುತ್ತಿದ್ದಾರೆ ಎಂದು ಯತ್ನಟ್ಟಿ ಆರೋಪಿಸಿದರು.

promotions

ನಗರದ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಬ್ಯಾನರ್ ಅಳವಡಿಸಲು ಸಹಕಾರ ನೀಡುತ್ತಿಲ್ಲ. ಇವರ ವರ್ತನೆ ನೋಡಿದರೆ ಕನ್ನಡಿಗರು ಎಂಇಎಸ್ ನೊಂದಿಗೆ ಕೈ ಜೋಡಿಸಿದರೂ ಅಚ್ಚರಿ ಪಡಬೇಕಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Read More Articles