ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನೇಮಕ
- Krishna Shinde
- 13 Jan 2024 , 7:20 AM
- Bengaluru
- 848
ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನೇಮಕಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿ ನೇಮಕಗೊಂಡ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ರಜನೀಶ ಅವರ ಬಗ್ಗೆ ಕಿರು ಮಾಹಿತಿ
ಭಾರತೀಯ ಆಡಳಿತ ಸೇವೆ (IAS) 1989 ರ ಬ್ಯಾಚ್‌ನ ಮಹಿಳಾ ಟಾಪರ್ ಡಾ. ಶಾಲಿನಿ ರಜನೀಶ್, ಸೈಕಾಲಜಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಮತ್ತು ಅವರು ಆಸ್ಟ್ರೇಲಿಯಾದಿಂದ MBA, ಮತ್ತು Ph.D. ಗ್ರಾಮೀಣಾಭಿವೃದ್ಧಿಯಲ್ಲಿ ಹೊಂದಿದ್ದಾರೆ.
ಅವರು ಮ್ಯಾನೇಜ್‌ಮೆಂಟ್, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ಐಎಎಸ್ ಕೋಚಿಂಗ್ ಮುಂತಾದ ವಿವಿಧ ವಿಷಯಗಳನ್ನು ಒಳಗೊಂಡ 13 ಪುಸ್ತಕಗಳನ್ನು ಇಂಗ್ಲಿಷ್‌ನಲ್ಲಿ ಮತ್ತು 5 ಕನ್ನಡದಲ್ಲಿ ಬರೆದಿದ್ದಾರೆ.










