ನಿಮ್ಮ ಸ್ಥಾನದಲ್ಲಿದ್ರೆ ನಾನು ಆತ್ಮಹತ್ಯ ಮಾಡ್ಕೊತ್ತಿದ್ದೆ ಮಾಜಿ ಶಾಸಕನಿಗೆ ಹಾಲಿ ಶಾಸಕ ಲೇವಡಿ
- Shivaraj Bandigi
- 15 Jan 2024 , 12:33 AM
- Belagavi
- 236
ಕಾಗವಾಡ: ನಿಮ್ಮ ಸ್ಥಾನದಲ್ಲಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಶಾಸಕ ಶ್ರೀಮಂತ ಪಾಟೀಲ್ ಗೆ ಕಾಗವಾಡ ಹಾಲಿ ಶಾಸಕ ರಾಜು ಕಾಗೆ ವ್ಯಂಗ್ಯವಾಡಿದ್ದಾರೆ.

ಅವರು ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಸ್ವಕಚೇರಿಯಲ್ಲಿ " ನನಗೆ ಒಂದು ತಿಂಗಳ ಅಧಿಕಾರ ಕೊಡಿ ನಾನು ಬಸವೇಶ್ವರ ನೀರಾವರಿ ಕಾಲುವೆಗೆ ನೀರು ಹರಿಸುವೆ ಎಂಬ ವಿಚಾರವಾಗಿ "ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಐದು ವರ್ಷ ಏನು ಮಾಡಿದಿರಿ ಈಗ ಒಂದು ತಿಂಗಳು ಅಧಿಕಾರದ ಗಡವು ಕೇಳಲು ತಮಗೆ ಯಾವ ಅರ್ಹತೆ ಇದೆ ಬಸವೇಶ್ವರ ಏತ ನೀರಾವರಿ ಪೂರ್ಣಗೊಳ್ಳದೆ ಇದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಚುನಾವಣೆ ಪೂರ್ವ ಖಿಳೆಗಾವಿ ಬಸವಣ್ಣ ದೇವಸ್ಥಾನದಲ್ಲಿ ರೈತರಿಗೆ ಪ್ರಮಾಣ ನೀಡಿದ್ದೀರಿ ಮತ್ತೆ ಚುನಾವಣೆಗೆ ಯಾವ ಮುಖ ಇಟ್ಟು ಮತ ಕೇಳಿದ್ರಿ.
ರೈತರು ಬಹಳ ಬುದ್ಧಿವಂತರು ಅದಕ್ಕೆ ತಮಗೆ ತಕ್ಕ ಪಾಠ ಕಲಿಸಿ ನನ್ನನ್ನು ಗೆಲ್ಲಿಸಿದ್ದಾರೆ ನಿಮಹಾಗೆ ಡಿಸೆಂಬರ್ 35ಕ್ಕೆ ನೀರು ಹರಿಸುವೆ ಎಂಬ ಟೊಳ್ಳು ಭರವಸೆ ನಾನು ನೀಡಲ್ಲ ತಾವು ಬಸವೇಶ್ವರ ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದೀರಿ ಈ ಯೋಜನೆಯಲ್ಲಿ ಹಸ್ತಕ್ಷೇಪ ಮಾಡದಿರಿ ಎಂದು ಮಾಜಿ ಶಾಸಕ ಶ್ರೀಮಂತ ಪಾಟೀಲಗೆ ಶಾಸಕ ರಾಜು ಕಾಗೆ ಮಾತಿನಲ್ಲಿ ತಿವಿದಿದ್ದಾರೆ.










