ಸಿದ್ದರಾಮಯ್ಯ ಕೇಸರಿ ಪೇಟ ಹಾಕಿದರೆ ತೆಗೆಯುತ್ತಾರೆ : ಅಶ್ವಥ್ ನಾರಾಯಣ್

ಬೆಳಗಾವಿ :

promotions

ಸಿಎಂ ಸಿದ್ದರಾಮಯ್ಯನವರಿಗೆ ಕೇಸರಿ ಶಾಲು, ಕೇಸರಿ ಪೇಟ ಹಾಕಿದರೆ ಅದನ್ನು ತೆಗೆದುಹಾಕತ್ತಾರೆ. ಮತಕ್ಕಾಗಿ ಬಾಂಧವ್ಯ ತೋರಿಸುತ್ತಾರೆ. ಆದರೆ ಕುರುಬಾನಿ ಕೊಡುತ್ತೇವೆ ಎನ್ನುವ ಧರ್ಮಗುರುವಿನ ಪಕ್ಕ ಭರ್ಜರಿಯಾಗಿ ಕುಳಿತುಕೊಳ್ಳತ್ತಾರೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

promotions

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ನವರು ಅಂದರೆ ಕೋಮುವಾದಿಗಳು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯೋಚನೆ ಮಾಡಿ ಕಾರ್ಯಕ್ರಮಕ್ಕೆ ಹೋಗಬೇಕು.ಜವಾಬ್ದಾರಿ ಮರೆತು ಬರೀ ರಾಜಕೀಯ ಮಾಡಬಾರದು. ಕಾಂಗ್ರೆಸ್ ಸರ್ಕಾರ ಮನಬಂದಂತೆ ಆಡಳಿತ ನಡೆಸುತ್ತಿದೆ. ರೈತರ ಹಿತ ಕಾಪಾಡಲು ವಿಫಲವಾಗಿರುವ ಸರ್ಕಾರದ ನಡೆಯನ್ನು ಬಯಲಿಗೆ ಎಳೆಯಲು. ಕಾನೂನು ಸುವ್ಯವಸ್ಥಿತೆ ಹದಗೆಟ್ಟಿರುವ ಬಗ್ಗೆ ನಾವು ಪ್ರಶ್ನೆ ಮಾಡುತ್ತಿದ್ದೆವೆ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಲು ಸಹ ನಾವು ಮನವಿ ಮಾಡಿದ್ದೇವೆ. ಎಸ್ ಪಿಇಟಿಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗೆ ಒಳಪಡುವ ಇಲಾಖೆಗಳಿಗೆ ನೀಡಲು ಇವರಿಗೆ ಹಣ ಇಲ್ಲ.

ಬರೀ ನಾಮಕಾವಸ್ತೆಗೆ ಗ್ಯಾರಂಟಿ ಯೋಜನೆಗಳಿವೆ.

ಅಭಿವೃದ್ಧಿ ಅನ್ನುವ ಪದವೇ ಗ್ಯಾರಂಟಿ ಯೋಜನೆ ಕಂಡಿಲ್ಲ ಎಂದರು.

Read More Articles