ಹಗಲು ಕಂಡ ಬಾವಿಗೆ ರಾತ್ರಿ ಯಾರಾದರೂ ಬೀಳ್ತಾರ ರಾಜು ಕಾಗೆ ಬಿಜೆಪಿಗೆ ಟಾಂಗ್
- Shivaraj Bandigi
- 15 Jan 2024 , 12:23 AM
- Belagavi
- 367
ಅಥಣಿ : ಸವದಿ ಹಾಗೂ ಶೆಟ್ಟರ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ಅವ್ಹಾನ ನೀಡಿದ ಹಿನ್ನೆಲೆಯಲ್ಲಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಸವದಿ ಸೆಟ್ಟರ್ ಗೆ ಬಿಜೆಪಿ ಆಹ್ವಾನ ವಿಚಾರಕ್ಕೆ ಶಾಸಕ ರಾಜು ಕಾಗೆ ಬಿಜೆಪಿ ಯವರಿಗೆ ತಿರುಗೇಟನ್ನ ನೀಡಿದ್ದಾರೆ.

ಇದು ಹುಡುಗಾಟವಲ್ಲ ರಾಜಕೀಯ ಯಾರು ಎಲ್ಲು ಹೋಗಲ್ಲ ಸ್ಥಿರವಾಗಿರುತ್ತಾರೆ ಬಿಜೆಪಿ ಪಕ್ಷದ ಹೀನಾಯ ಸೋಲು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ ಯಾರು ಬಿಜೆಪಿ ಗೆ ಹೋಗಲು ಬಯಸುವುದು ಇಲ್ಲ
ಇದೆಲ್ಲ ಉಹಾಪೋಹವಸ್ಟೆ ಎಂದು ಬಿಜೆಪಿ ಗೆ ತಿರುಗೇಟು ನೀಡಿದ್ದಾರೆ.










