ವಾಲ್ಮೀಕಿ ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದರೆ 2ನೇ ಬೇಡರ ದಂಗೆ ಆಗುವುದರಲ್ಲಿ ಸಂಶಯವಿಲ್ಲ: ಮಹೇಶ ಶಿಗೀಹಳ್ಳಿ
- krishna shinde
- 31 Jan 2024 , 11:37 AM
- Belagavi
- 867
ಬೆಳಗಾವಿ:ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದರಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಕೊಡುಗೆ ಅಪಾರವಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ಒಳ್ಳೆ ಒಳ್ಳೆಯ ಯೋಜನೆಗಳನ್ನು ಜಾರಿಗೆ ತಂದಿದೆ ಇದನ್ನು ಕರ್ನಾಟಕದ ಜನತೆ ಸ್ವಾಗತಿಸುತ್ತೇವೆ ಅಬಿನಂದಿಸುತ್ತೇವೆ ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.

ಆದರೆ ಅಧಿಕಾರಕ್ಕೆ ಬಂದ ಸರಕಾರ ಮಾನ್ಯ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಜನರಿಗೆ ಒಳ್ಳೆಯ ಸೇವೆ ಸಲ್ಲಿಸುತ್ತೆ ಎಂಬ ಅಪಾರವಾದ ನಂಬಿಕೆ ಇದೆ ಆದರೆ ಮಾನ್ಯ ಮುಖ್ಯ ಮಂತ್ರಿಗಳು ಅಧಿಕಾರಕ್ಕೆ ಬಂದ ಮೇಲೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಲು ಪ್ರಯತ್ನ ಮಾಡುತ್ತಿರುವುದು ಖಂಡನೀಯ
ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.

ಈಗಾಗಲೇ ವಾಲ್ಮೀಕಿ ನಾಯಕ ಸಮುದಾಯಕ್ಕೆ 7% ಮೀಸಲಾತಿಗಾಗಿ ಹಲವು ಹೋರಾಟಗಳನ್ನು ಮಾಡುತ್ತಾ ಕೊನೆಗೆ ಮೀಸಲಾತಿ ಹಲವು ವರ್ಷಗಳು ಆದಮೇಲೆ ಮೀಸಲಾತಿ ಪಡೆದುಕೊಂಡಿದೆ. ಆದರೆ ಅದು ಸರಿಯಾಗಿ ಅನುಷ್ಠಾನಗೊಂಡಿಲ್ಲ ಹೀಗಿದ್ದರೂ ನಮ್ಮ ವಾಲ್ಮೀಕಿ ನಾಯಕ ಸಮುದಾಯದ ಜನರು ಶಿಕ್ಷಣ ಮತ್ತು ಹುದ್ದೆ ಹುದ್ದೆಯ ಬಡ್ತಿ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಸೌಲಭ್ಯಗಳಲ್ಲಿ ಮೀಸಲಾತಿ ಪಾಲನೆ ಆಗದೆ ಹಲವು ಸೌಲಭ್ಯಗಳಿಂದ ವಂಚಿರಾಗಿದ್ದಾರೆ ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.
ಹೀಗಿರುವಾಗ ಮಾನ್ಯ ಮುಖ್ಯಮಂತ್ರಿಗಳು ವಾಲ್ಮೀಕಿ ನಾಯಕ ಸಮುದಾಯದ ST ವರ್ಗದಲ್ಲಿ ಇನ್ನುಳಿದ ಅಂಬಿಗ ಸೇರಿ 39 ಉಪಜಾತಿಗಳು ST ಗೆ ಸೇರ್ಪಡೆ ಮಾಡಿಸುವಲ್ಲಿ ಕೇಂದ್ರಕ್ಕೆ ಶಿಪಾರಸ್ಸು ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದು ಖಂಡನೀಯ ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.
ST ವರ್ಗದಲ್ಲಿ ಇರುವ ನಾಯಕ ಸಮುದಾಯ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದೆ ST ಯಲ್ಲಿ ಯಾರನ್ನು ಸೇರ್ಪಡೆ ಮಾಡದಂತೆ ಮತ್ತು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯುವಂತೆ ಆಗ್ರಹಿಸುತ್ತಾ ನಾಯಕ ಸಮುದಾಯ ಸರಕಾರಕ್ಕೆ ಮನವಿ ಮತ್ತು ವಿವಿಧ ರೀತಿಯಲ್ಲಿ ಹೋರಾಟ ಮಾಡಿದರು ಕೂಡ ಮಾನ್ಯ ಮುಖ್ಯಮಂತ್ರಿಗಳು ಈ ರೀತಿ ನಾಯಕ ಸಮುದಾಯಕ್ಕೆ ಅನ್ಯಾಯ ಮಾಡುವ ಪ್ರಯತ್ನ ಸರಿ ಇಲ್ಲ ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಅವರಿಗೆ ಹೇಗೆ ಬೇಕೋ ಹಾಗೆ ಸರಕಾರ ನಡೆಸುತ್ತಿರುವುದು ಇದ್ಯಾವ ನ್ಯಾಯ. ಈ ವಿಷಯವಾಗಿ ವಾಲ್ಮೀಕಿ ನಾಯಕ ಸಮುದಾಯದ ವರ್ಗದಲ್ಲಿ ಆರಿಸಿ ಬಂದ ರಾಜಕೀಯ ನಾಯಕರು ದ್ವನಿ ಎತ್ತಬೇಕಿದೆ ನಾಯಕ ಸಮುದಾಯವನ್ನು ಅಪಾಯದಿಂದ ರಕ್ಷಿಸಬೇಕಿದೆ.ಇಲ್ಲವಾದರೆ ಇಡಿ ರಾಜ್ಯಾದ್ಯಂತ ವಾಲ್ಮೀಕಿ ನಾಯಕ ಸಮುದಾಯ ಹೋರಾಟಕ್ಕೆ ಇಳಿದರೆ 2 ನೆ ಬೇಡರ ದಂಗೆ ಆಗುವುದರಲ್ಲಿ ಸಂಶಯವಿಲ್ಲ ಸರಕಾರ ಯಾವುದೇ ಆಗಿರಲಿ ಅದು ಅಧಿಕಾರದಲ್ಲಿ ಉಳಿಯುವುದು ಕನಸಿನ ಮಾತು ಎಂದು ಮಹೇಶ ಶಿಗೀಹಳ್ಳಿ ಹೇಳಿದ್ದಾರೆ.
ಸರಕಾರ ಈ ವಿಷಯವಾಗಿ ಎಚ್ಚೆತ್ತು ಕೊಳ್ಳದಿದ್ದರೆ ಬರುವಂತ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ನಾಯಕ ಸಮುದಾಯದ ಪರವಾಗಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಶಿಗೀಹಳ್ಳಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.










