ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ, ನೀವು ಅಶ್ಲೀಲ ಆಗುತ್ತೀರೀ: ಯತ್ನಾಳ್.
- shivaraj bandigi
- 30 Apr 2024 , 3:38 PM
- Belagavi
- 478
ಹಿಂದೂ ಅನ್ನುವ ಪದವೇ ಅಶ್ಲೀಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು, ನೀವೇನಾದ್ರೂ ತಪ್ಪಿ ಅವರ ಪುತ್ರಿಗೆ ಮತ ನೀಡಿದರೆ ನೀವೆಲ್ಲರೂ ಅಶ್ಲೀಲ ಆಗುತ್ತೀರಿ, ನಿಮಗೆ ಏನಾದರೂ ಹಿಂದೂ ಧರ್ಮದ ಬಗ್ಗೆ ಸ್ವಾಭಿಮಾನ ಇದ್ದರೆ ಬಿಜೆಪಿಗೆ ಮತ ನೀಡಿ ಎಂದು ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಹೇಳಿದರು.

ಸಂಕೇಶ್ವರ ಪಟ್ಟಣದಲ್ಲಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಅಣ್ಣಸಾಬ್ ಜೊಲ್ಲೆ ಅವರ ಪರವಾಗಿ ಪ್ರಚಾರಾರ್ಥವಾಗಿ ಮಾತನಾಡಿ, ಸಾಹುಕಾರನ ಹಣ ತೆಗೆದುಕೊಂಡು ಕಾಂಗ್ರೆಸ್ ಮತ ನೀಡಿದರೆ, ದೇಶವೇ ಉಳಿಯುವುದಿಲ್ಲ, ನಿಮ್ಮ ರಕ್ಷಣೆ ಮಾಡುವುದಿಲ್ಲ, ಹಿಂದೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು, ಸದ್ಯಕ್ಕೆ ಸತೀಶ್ ಜಾರಕಿಹೊಳಿ ಯಾಕೆ ಸ್ಮಶಾನಕ್ಕೆ ಹೊಗುತಿಲ್ಲ, ಚುಣಾವಣೆ ಬಂದ ತಕ್ಷಣವೇ ಹಿಂದೂ ದೇವಾಲಯಗಳು, ಮಠಗಳು ಸಚಿವ ಜಾರಕಿಹೊಳಿ ಅವರಿಗೆ ನೆನಪಾಗಿದೆ ಎಂದು ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ರಾಹುಲ್ ಮಾದರ











