ಪರಿಹಾರದ ಹೆಸರಲ್ಲಿ ಮೂಗಿಗೆ ತುಪ್ಪ ಸವರಿದ ಸರ್ಕಾರ;ಸಮರ್ಪಕ ಪರಿಹಾರಕ್ಕೆ ರೈತರ ಪಟ್ಟು
- shivaraj bandigi
- 14 May 2024 , 2:45 PM
- Belagavi
- 492
ಅಥಣಿ : ರಾಜ್ಯ ಹಾಗೂ ಕೇಂದ್ರ ಸರ್ಕಾರ ಬರ ಪರಿಹಾರದ ಹೆಸರಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಶೀಘ್ರವೆ ಪರಿಹಾರ ಬಿಡುಗಡೆಗೆ ರೈತ ಮುಖಂಡ ಮಹಾದೇವ ಮಡಿವಾಳ ಆಗ್ರಹಿಸಿದ್ದಾರೆ.

ಅವರು ಪಟ್ಟಣದ ಕೃಷಿ ಇಲಾಖೆ ಎದುರು ನೂರಾರು ರೈತರ ಸಮ್ಮುಖದಲ್ಲಿ ಕೃಷಿ ಅಧಿಕಾರಿ ಅವರಿಗೆ ಮನವಿ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದ್ದೂ ರಾಜ್ಯ ಸರ್ಕಾರ ವಿಳಂಬ ತೋರುತ್ತಿದೆ. ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಕೇವಲ 25% ರೈತರಿಗೆ ಮಾತ್ರ ಬರ ಪರಿಹಾರದ ಹಣ ಜಮೆಯಾಗಿದ್ದು ಇತ್ತ ಕೃಷ್ಣ ನದಿ ತೀರದ ರೈತರ ಕಬ್ಬು ಸಂಪೂರ್ಣ ಒಣಗಿವೆ ಕೂಡಲೆ ಎಲ್ಲ ರೈತರಿಗೆ ಶೀಘ್ರವೆ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಅಗ್ರಹಿಸಿದರು.
ವರದಿ : ರಾಹುಲ್ ಮಾದರ










