ಭಾರತ-ಚೀನಾ ಗಡಿ ಸಂಘರ್ಷ ಅಂತ್ಯ: BRICS ಶೃಂಗದಲ್ಲಿ disengagement ಒಪ್ಪಂದ
ಭಾರತ ಮತ್ತು ಚೀನಾ ನಿಯಂತ್ರಣ ರೇಖೆ (LAC)ಯಲ್ಲಿ ಸೇನೆಯನ್ನು ಹಿಂದಕ್ಕೆ ಸೆಳೆಯಲು (disengagement) ಒಪ್ಪಂದ ಮಾಡಿಕೊಂಡಿವೆ. ಈ ಮಹತ್ವದ ಒಪ್ಪಂದವನ್ನು ರಷ್ಯಾದಲ್ಲಿ ನಡೆದ BRICS ಶೃಂಗಸಭೆಯಲ್ಲಿ ಅಂತಿಮಗೊಳಿಸಲಾಯಿತು.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಈ ವಿಷಯವನ್ನು ದೃಢಪಡಿಸಿದ್ದು, ಶೀಘ್ರದಲ್ಲೇ ಎರಡೂ ದೇಶಗಳ ಸೈನ್ಯಗಳು ನಿಯಂತ್ರಣ ರೇಖೆ ಆಧಾರದ ಮೇಲೆ ಗಸ್ತು ಆರಂಭಿಸಲಿವೆ ಎಂದು ತಿಳಿಸಿದರು.ಇದು ಗಡಿ ಪ್ರದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಪ್ರಮುಖ ಹೆಜ್ಜೆ ಎನಿಸಲಿದೆ.

ಈ ಒಪ್ಪಂದವು ಎರಡೂ ದೇಶಗಳ ನಡುವಿನ ವೈಷಮ್ಯವನ್ನು ಶಾಂತಿಯುತವಾಗಿ ಬಗೆಹರಿಸಲು ಪಥ ಪ್ರದರ್ಶಕವಾಗಿದ್ದು, ಭವಿಷ್ಯದಲ್ಲಿ ಎರಡೂ ದೇಶಗಳ ನಡುವೆ ಉತ್ತಮ ಸಹಕಾರಕ್ಕಾಗಿ ದಾರಿಯೊಡ್ಡಲಿದೆ.










