ಬೆಳಗಾವಿಯಲ್ಲಿ ಆಟೋ ಮೀಟರ್ ಅಳವಡಿಕೆ ಕಡ್ಡಾಯ

ಬೆಳಗಾವಿ : ಆಟೋರಿಕ್ಷಾ ಚಾಲಕರು ಸಾರಿಗೆ ನಿಯಮ ಪಾಲಿಸಬೇಕು.
ಆಟೋರಿಕ್ಷಾಗಳಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಮೀಟರ್ ಅಳವಡಿಸಿದ ಬಳಿಕವಷ್ಟೇ ಬಾಡಿಗೆ ದರ ಪರಿಷ್ಕರಣೆ ಮಾಡಿ ಸೂಕ್ತ ದರ ನಿಗದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

promotions

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

promotions

ಆಟೋರಿಕ್ಷಾಗಳ ಪ್ರಸ್ತುತ ಮಿನಿಮಮ್ ಬಾಡಿಗೆ ದರ 1.5 ಕಿ.ಮೀ ಗೆ 25 ರೂಪಾಯಿ ಇದೆ. ಆದರೆ ಕೆಲವು ಆಟೋರಿಕ್ಷಾಗಳು ಬೇಕಾಬಿಟ್ಟಿ ದರ ಹೇಳಿ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿವೆ. ಅಂತಹ ಆಟೋರಿಕ್ಷಾಗಳನ್ನು ಸೀಜ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಿನನಿತ್ಯ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಆಟೋರಿಕ್ಷಾ ಚಾಲಕರು ಕೇವಲ 1.5 ಕಿಲೋ ಮೀಟರ್ ಗೆ 150 ರಿಂದ 200 ರುಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ಆಟೋರಿಕ್ಷಾಗಳು ಕೂಡಲೇ ಮೀಟರ್ ಅಳವಡಿಸಬೇಕು ಎಂದು ತಿಳಿಸಿದರು.

ರಾತ್ರಿ ಹೊತ್ತಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಆಟೋರಿಕ್ಷಾಗಳ ಬಾಡಿಗೆ ದರ ಕೇಳಿ ಬೇಸತ್ತು ಹೋಗಿದ್ದಾರೆ. ಈ ರೀತಿಯಲ್ಲಿ ಸುಲಿಗೆ ಮಾಡುವುದು ಕಂಡು ಬಂದಲ್ಲಿ, ಆಟೋ ಸೀಜ್ ಮಾಡಿ, ಚಾಲಕರ ವಾಹನ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಕುರಿತು ಆಟೋರಿಕ್ಷಾ ಸಂಘಗಳ ಪದಾಧಿಕಾರಿಗಳು ಸಂಘದ ಸದಸ್ಯ ಚಾಲಕರುಗಳಿಗೆ ಸೂಚನೆ ನೀಡಬೇಕು.
ಆಟೋರಿಕ್ಷಾ ಸಂಘಗಳ ಪದಾಧಿಕಾರಿಗಳು ಮೀಟರ್ ಅಳವಡಿಕೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ನೀಡಿದರೆ ಮಾತ್ರ ಪರಿಷ್ಕರಣೆ ದರ ನಿಗದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಸ್ನೇಹಾ ಪಿ.ವಿ, ರಸ್ತೆ ಸಾರಿಗೆ ಅಧಿಕಾರಿ ಎಸ್. ಬಿ ಮಗದುಮ್ಮ,
ಆಟೋ ರಿಕ್ಷಾ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Read More Articles