ಇದು ಸರ್ಕಾರಿ ಕಚೇರಿನಾ?

ಅಥಣಿ : ಭ್ರಷ್ಟಾಚಾರದ ಆರೋಪ ಹಿನ್ನೆಲೆ ಅಥಣಿ ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿಗಳ ಕುರ್ಚಿ ಖಾಲಿಯಾಗಿಯೇ ಇದೆ, ರೈತರೂ ತಮ್ಮ ಸಮಸ್ಯೆಗೆ ಉತ್ತಮ ಸ್ಪಂದನೆ ದೊರಕದೆ ನಿರಾಸೆಯಿಂದ ಹೋಗುವಂತಾಗಿದೆ.

promotions

ಇವುಗಳ ಮದ್ಯ ದಿನ ನೂರಾರು ರೈತ ಸಂಪರ್ಕ ಕೇಂದ್ರವಾದ ತೊಟಗಾರಿಕೆ ಕಚೇರಿ ಗಬ್ಬೆದ್ದು ನಾರುತ್ತಿದೆ. ಸುತ್ತಲೂ ಕಸ ಕಡ್ಡಿ ಹಾಗೂ ಪ್ಲಾಸ್ಟಿಕ್ ನಂತ ತ್ಯಾಜ್ಯ ವಸ್ತುಗಳೇ ತುಂಬಿಕೊಂಡಿದ್ದು ಸ್ವಚ್ಛತೆ ಮಾಯವಾಗಿದೆ.

promotions

ರೈತರೂ ಕಚೇರಿಗೆ ಬಂದರೆ ವಿಶ್ರಾಂತಿಗಾಗಿ ಸ್ಥಳಾವಕಾಶ ವಿದ್ದರೂ ಕುರ್ಚಿಗಳು ಕಾನಸಿಗುತ್ತಿಲ್ಲ.

ಕಚೇರಿ ಬಾಗಿಲಲ್ಲೆ ಪಾನ್, ಗೂಟಕಾ ತಿಂದು ಉಗುಳಿದ ಕಲೆಗಳು ಬಾಗಿಲಿಗೆ ಬಣ್ಣ ಬಳಿದಂತಾಗಿವೆ. ಉತ್ತಮರ ಕಚೇರಿ ಈಗ ಕಾಡು ಕೊಂಪೆಯಾಗಿದ್ದು ಮೇಲಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಗಳ ನಿರ್ಲಕ್ಷತೆ ಹಾಗೂ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಿದೆ.

ವರದಿ : ರಾಹುಲ್  ಮಾದರ 

Read More Articles