ಬಿಜೆಪಿಗರು ಅನಾವಶ್ಯಕ ರಾಜ್ಯದ ಮೇಲೆ ಗುಬೆ ಕುಡಿಸುತ್ತಿರುವುದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ

ಕೊಪ್ಪಳ : ಬಿಜೆಪಿಗರಂತೆ ನಾವು ರಾಜಕೀಯ ಮಾಡುವುದಿಲ್ಲ. ಬಿಜೆಪಿಗರು ಅನಾವಶ್ಯಕ ರಾಜ್ಯದ ಮೇಲೆ ಗುಬೆ ಕುಡಿಸುತ್ತಿರುವ ಕೆಲಸ ಸರಿ ಅಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

promotions

ಅವರು ತಾಲೂಕಿನ ಬಸಾಪೂರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ  ಟ್ರಸ್ಟ್ ಗೇಟ್ 19 ಕಳಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ರಾಜಕೀಯ ಮಾಡೋದಿಲ್ಲ. 

promotions

ತುಂಗಭದ್ರಾ ಬೋರ್ಡ್ ಇರುವುದು ಕೇಂದ್ರ ಸರಕಾರದ ಅಧೀನದಲ್ಲಿ. ಬೋರ್ಡ್ ಗೆ ಐಎಎಸ್ ಅಧಿಕಾರಿಗಳನ್ನು ಭಾರತ ಸರಕಾರ ನೇಮಕ ಮಾಡುತ್ತದೆ‌. ಬೋರ್ಡ್ ನಲ್ಲಿ ರಾಜ್ಯ, ಆಂಧ್ರ, ತೆಲಂಗಾಣದ ಅಧಿಕಾರಿಗಳು ಇರುತ್ತಾರೆ ಅವರಿಗೆ ತಿಳುವಳಿಕೆಯ ಕೋರತೆ ಇದೆ ಎಂದರು. 

ರೈತರ ಹಿತ ಕಾಯುವುದು ಮೊದಲ ಆದ್ಯತೆ. ತುಂಗಭದ್ರಾ ಜಲಾಶಯ 105 ಟಿಎಂಸಿ ತುಂಬಿತ್ತು. ಇದರಲ್ಲಿ 50 ಟಿಎಂಸಿ ನೀರು ಹೊರ ಬಿಡಬೇಕಿದೆ. ಉಳಿಯುವ ನೀರನ್ನು ರೈತರ ಅನುಕೂಲಕ್ಕೆ ಬಳಸಲಾಗುವುದು ಎಂದು ಸ್ಪಷ್ಟ ಪಡಿಸಿದರು.

ವಾಸ್ತವವಾಗಿ ನಿರ್ವಹಣೆ ವೈಫಲ್ಯ ಇರುವುದು ಕೇಂದ್ರ ಸರಕಾರದಿಂದ. ಇದೆಲ್ಲವನ್ನು ಆರೋಪ ಮಾಡಬೇಕಾಗಿರುವುದು ಕೇಂದ್ರದ ಮೇಲೆ, ಆದರೆ, ನಾನು ಡ್ಯಾಂ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೋಡೋದಕ್ಕೆ ಹೋಗೋದಿಲ್ಲ.

ನಮಗಿರುವ  ಹವಾಮಾನ ಮೂನ್ಸೂಚನೆ ಪ್ರಕಾರ ಮತ್ತೆ ಮಳೆ‌ ಆಗುವ ಅವಕಾಶವಿದ್ದು ಆಗಷ್ಟ್, ಸೆಪ್ಟಂಬರ್, ಅಕ್ಟೊಬರ್ ತಿಂಗಳಲ್ಲಿಮತ್ತಷ್ಟು ನೀರು ಬರುವ  ನಿರೀಕ್ಷೆ ಇದೇ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಬೋಸರಾಜ, ಜಮ್ಮೀರ ಅಹ್ಮದ್ , ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹೆಚ್. ಆರ್. ಗವಿಯಪ್ಪ, ಎಂಎಲ್ಸಿ ಹಂಪನಗೌಡ ಬಾದರ್ಲಿ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರು ಇದ್ದರು.

ವರದಿ : ರವಿಚಂದ್ರ  ಬಡಿಗೇರ 

Read More Articles