ಮಾಜಿ ಸೈನಿಕರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಕೊಡದೆ ಅನ್ಯಾಯ

ಬೆಳಗಾವಿ :

promotions

ಮಾಜಿ ಸೈನಿಕರಿಗೆ ರಾಜ್ಯ ಸರಕಾರಿ ನೌಕರಿಯಲ್ಲಿ ಇರುವ ಶೇ.10 ರಷ್ಟು ಮೀಸಲಾತಿ ಕೊಡದೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ಮಾಜಿ ಸೈನಿಕರ ಮಹಾ ಒಕ್ಕೂಟ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

promotions

ಸುಮಾರು 30 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಸೈನಿಕರಿಗೆ ರಾಜ್ಯ ಸರಕಾರಿ ನೌಕರಿಯಲ್ಲಿ ಶೇ.10 ರಷ್ಟು ಮೀಸಲಾತಿ ಇದೆ. ಆದರೆ ಇತ್ತಿಚೆಗೆ ಸರಕಾರ ಹೊರಡಿಸಿರುವ ಗ್ರಾಮ ಲೆಕ್ಕಾಧಿಕಾರಿ, ಅರಣ್ಯ ರಕ್ಷಕ ಹಾಗೂ ಕೆಎಎಸ್ ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿ ಸಿಗದೆ ಅನ್ಯಾಯ ಮಾಡಿದೆ. ಇದನ್ನು ಸರಕಾರ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Read More Articles