ಪಂಚಮಸಾಲಿ ಮೀಸಲಾತಿ ಹೋರಾಟದ ಫಲದಿಂದ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ :ಪಂಚಮಸಾಲಿ ಮೀಸಲಾತಿ  ಹೋರಾಟದ ಫಲದಿಂದ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ. ನಾಳೆ ಜಯ ಸಿಗುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

promotions

ಬುಧವಾರ ಸುವರ್ಣ ವಿಧಾನಸೌಧದ ಬಳಿ ನಡೆಸಲಾಗುತ್ತಿರುವ ಸಮಾವೇಶದ ಬಳಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಮಸಾಲಿ ತಮಗಾಗಿ ಏನೂ ಬಯಸಿದವರಲ್ಲ. ಮೀಸಲಾತಿ ಅರ್ಜಿ ಹಾಕಿ ಎಂದಾಗಲೂ ನಾವು ತಿರಸ್ಕಾರ ಮಾಡಿದ್ದೇವು. ಶೈಕ್ಷಣಿಕವಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ‌ನೀಡುವ ಕುರಿತಾಗಿ ಹೋರಾಟಕ್ಕೆ ಜಯ‌ ಸಿಗುವ ವಿಶ್ವಾಸ ಇದೆ ಎಂದರು.

promotions


ಮುಖ್ಯಮಂತ್ರಿಗಳೇ ನಮಗೆ ಗಡುವು ನೀಡಿದ್ದಾರೆ. ಅವರೇ‌ ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಡಿ.22 ರಂದು ಅಂತಿಮ ಹೋರಾಟ ನಡೆಸಲಿದ್ದೇವೆ ಎಂದರು.

ಗುರುವಾರ ಬೆಳಗ್ಗೆ 11 ಗಂಟೆಗೆ ವಿರಾಟ ಪಂಚಶಕ್ತಿ ಸಮಾವೇಶ ನಡೆಸಲಾಗುವುದು. ಪಾದಯಾತ್ರೆ ಇಲ್ಲಿಗೆ ಬರುವವರೆಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದರೆ ಕಲ್ಲು ಸಕ್ಕರೆ ತುಲಾಭಾರ ಮಾಡಿ ಸಿಎಂ ಬೊಮ್ಮಾಯಿ ಅವರನ್ನು ಗೌರವಿಸಲಾಗುವುದು ಎಂದರು.

Read More Articles