ಜಗದೀಶ್ ಶೆಟ್ಟರ್ ಗೆಲುವು: ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭರ್ಜರಿ ಸಂಭ್ರಮ

Listen News

ಬೆಳಗಾವಿ :ಲೋಕಸಭೆ ಚುನಾವಣೆಯ ಮತ ಎಣಿಕೆ ಮುಗಿದ ಹಿನ್ನಲೆಯಲ್ಲಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಆರ್ ಪಿಡಿ ಕ್ರಾಸ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಗುಲಾಲ ಎರಚಿ, ಘೋಷಣೆ ಹಾಕಿ ಸಂಭ್ರಮಾಚರಣೆ ಮಾಡಿದರು.

Your Image Ad

ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಆಚರಣೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ತಮ್ಮ ಉತ್ಸಾಹ ಮತ್ತು ಬೆಂಬಲವನ್ನು ಪ್ರದರ್ಶಿಸಿದರು.

Your Image Ad

ಜಗದೀಶ್ ಶೆಟ್ಟರ್ ಅವರ ಗೆಲುವು ಬಿಜೆಪಿ ಪಕ್ಷಕ್ಕೆ ಬೆಳಗಾವಿಯಲ್ಲಿ ಮಹತ್ತರ ಸಾಧನೆ ಎಂದು ಪರಿಗಣಿಸಲಾಗಿದೆ. ಈ ವಿಜಯವು ಪಕ್ಷದ ಸಮರ್ಪಣೆ ಮತ್ತು ಬೆಂಬಲವನ್ನು ಸ್ಪಷ್ಟಪಡಿಸಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ಹಬ್ಬದ ವಾತಾವರಣ ಮನೆಮಾಡಿದೆ.

Read More Articles