ಜೈ ಮಹಾರಾಷ್ಟ್ರ ನಾಮಫಲಕ ತೆರವುಗೊಳಿಸಿದ ಬೆಳಗಾವಿ ಮನಪಾ

ಬೆಳಗಾವಿ: ಬೆಳಗಾವಿಯ ತಾಲೂಕಿನ ಅನಗೋಳ ಗ್ರಾಮದಲ್ಲಿ ಜೈ ಮಹಾರಾಷ್ಟ್ರ ನಾಮಫಲಕ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ವಿವಾದಾತ್ಮಕ ನಾಮಫಲಕವನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದರು ಸದ್ಯ ಮಹಾನಗರ ಪಾಲಿಕೆ ಸಿಬ್ಬಂದಿ ನಾಮಫಲಕವನ್ನು ತೆರವುಗೊಳಿಸಿದ್ದಾರೆ, ಮತ್ತೊಂದೆಡೆ ಕರವೇ ಅನಗೋಳ ಚಲೋ ಕಾರ್ಯಕ್ರಮ ಮಾಡುವ ಎಚ್ಚರಿಕೆ ನೀಡಿದ್ದರು ಇದೆಲ್ಲವನ್ನೂ ಅರಿತು ಈ ಎಲ್ಲ ಕನ್ನಡಪರ ಹೋರಾಟಗಾರರ ಹೋರಾಟಕ್ಕೆ ಮಣಿದು ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್ ಅವರ ಸೂಚನೆ ಮೇರೆಗೆ ನಾಮಫಲಕವನ್ನು ತೆರವುಗೊಳಿಸಲಾಗಿದೆ.

Read More Articles