ಜ.26 ಸುವರ್ಣ ಅಕ್ಷರಗಳಿಂದ ಬರೆದಿಡುವ ದಿನ . ಎಸಿ ಪ್ರಭಾವತಿ

ಬೈಲಹೊಂಗಲ : ಭಾರತದ ಗಣರಾಜ್ಯ ಮತ್ತು ಏಕತೆಗಾಗಿ ಹಲವಾರು ಮಹನೀಯರು ಶ್ರಮಿಸಿದ್ದು, ಅವರ ಪರಿಚಯ ಇಂದಿನ ಯುವ ಪೀಳಿಗೆಗೆ ತಿಳಿಸುವದು ಅವಶ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು. 

promotions

ಅವರು ಶುಕ್ರವಾರ ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಮೈದಾನದಲ್ಲಿ 75ನೇಯ ಗಣರಾಜ್ಯೋತ್ಸವ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದು ಪ್ರತಿಯೊಬ್ಬ ಪ್ರಜೆಗೆ ಅವರ ಹಕ್ಕುಗಳನ್ನು ಕೊಟ್ಟಿರುವಂತಹ ದಿನ ಎಂದರು. 

promotions

ಭಾರತದ ಗಣರಾಜ್ಯಕ್ಕಾಗಿ ದೇಶ, ವಿದೇಶ ಸುತ್ತಿ ಹಲವು ಸಂಶೋಧನೆಗಳನ್ನು ನಡೆಸಿ ಭಾರತಕ್ಕೆ ಬೃಹತ ಗಾತ್ರದ ಸಂವಿಧಾನ ನೀಡಲಾಗಿದ್ದು ಪ್ರತಿಯೊಬ್ಬರು ಅದನ್ನು ಪಾಲಿಸಿ ಗೌರವಿಸುವದಾಗಬೇಕು ಎಂದರು. 

ತಹಶೀಲ್ದಾರ ಸಚ್ಚಿದಾನಂದ ಕುಚನೂರ ಸ್ವಾಗತಿಸಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸಿಇಓ ಸುಭಾಷ ಸಂಪಗಾವ ವಂದಿಸಿದರು. 

ವೇದಿಕೆಯ ಮೇಲೆ ತಾಲೂಕಾ ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಇದ್ದರು. ಪೊಲೀಸ್ ಇಲಾಖೆ, ಎನ್ ಸಿಸಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. 

ಈ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ವರದಿ : ರವಿಕಿರಣ್  ಯಾತಗೇರಿ 

Read More Articles