ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರವರ ಗುಣಗಾನ ಮಾಡಿದ ಜನಾರ್ಧನ ರೆಡ್ಡಿ

ಬೆಂಗಳೂರು:ವಿಧಾನಸಭೆ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ  
ಯು.ಟಿ ಖಾದರವರ ಗುಣಗಾನ ಮಾಡಿದ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ  ಹಾಗು ಸಚಿವ ಗಾಲಿ ಜನಾರ್ಧನ ರೆಡ್ಡಿ ಖಾದರ ಅವರ ವ್ಯಕ್ತಿತ್ವ ಹಾಗು ಅವರ ಸರಳ ಜೀವನದ ಬಗ್ಗೆ ಸದನದಲ್ಲಿ ಮಾತನಾಡಿದ್ದಾರೆ.

promotions

ಸರಳ ಮತ್ತು ಸಜ್ಜನಿಕೆಯ ಹೆಸರು ಅಂದ್ರೆ ಅದು ಯುಟಿ ಖಾದರ ಎಂದು ರೆಡ್ಡಿ ಹೇಳಿದ್ದಾರೆ,ಯುಟಿ ಖಾದರ ಅವರು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾಗಿದ್ದಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗು ಅಖಂಡ ಕನ್ನಡ ನಾಡಿನ ಪರವಾಗಿ ಯುಟಿ ಖಾದರ ಅವರಿಗೆ ಜನಾರ್ಧನ ರೆಡ್ಡಿ ಅಭಿನಂದನೆ ತಿಳಿಸಿದ್ದಾರೆ.

promotions


ಕರಾವಳಿ ಪ್ರದೇಶದಲ್ಲಿ ಜಾತಿ ಮತ ಬೇಧ ಭಾವ ಅನ್ನದೆ ಶಾಂತಿ ಮತ್ತು ಸೌಹಾದ್ರತೆಗೆ ಹೆಸರು ಯುಟಿ ಖಾದರ ,ಅವರು ಇಡಿ ದೇಶ ಕರಾವಳಿಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು  ರೆಡ್ಡಿ ಗುಣಗಾನ ಮಾಡಿದ್ದಾರೆ.

ಸದನದಲ್ಲಿ ಮೊದಲಬಾರಿಗೆ ಆಯ್ಕೆಯಾದವರ ಸಂಖ್ಯೆ 58ಕಿಂತ ಹೆಚ್ಚು ಮತ್ತು ಅವರಿಗೆ ಖಾದರವರ ಮಾರ್ಗದರ್ಶನ ಅತುಮುಲ್ಯ ಎಂದು ರೆಡ್ಡಿ ಹೇಳಿದ್ದಾರೆ.

ಬಹುಮತಗಳಿಸಿ ಸರ್ಕಾರ ರಚನೆ ಮಾಡಿರುವ ಸಿದ್ದರಾಮಯ್ಯರವರಿಗೆ ಅಭಿನಂದನೆ ತಿಳಿಸಿರುವ ಜನಾರ್ಧನ ರೆಡ್ಡಿ ಬಹುಮತ ಸರ್ಕಾರವನ್ನು ಜನತೆ ಆರಿಸಿ ತಂದಿರುವ ಕಾರಣ ಜನರ ನಿರೀಕ್ಷೆಗಳು ಬಹಳ ಇವೆ ಮತ್ತು ಆರಿಸಿ ಬಂದಿರುವ ಪ್ರತಿ ಸಚಿವರ ಕ್ಷೇತ್ರದ ಅಭಿವೃದ್ದಿಗಾಗಿ ಸರಕಾರ ಗಮನ ಹರಿಸಲಿ ಎಂದು ರೆಡ್ಡಿ ಹೇಳಿದ್ದಾರೆ.

Read More Articles