ಚಿಕ್ಕೋಡಿಯಲ್ಲಿ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸುತ್ತಾರೆ: ಶೀಗೇಹಳ್ಳಿ
- krishna shinde
- 31 Mar 2024 , 8:16 PM
- Belagavi
- 505
ಸಚಿವ ಸತೀಶ್ ಜಾರಕಿಹೊಳಿರವರ ಸುಪುತ್ರಿಯಾಗಿ ಯಾವುದೇ ಅಹಂಕಾರ ಇಲ್ಲದೆ ಜನರ ದ್ವಣಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಿ ಬಡವರಿಗೆ ಸಹಾಯ ಮಾಡುವ ಗುಣ ಪ್ರಿಯಂಕಾ ಹೊಂದಿದ್ದು ತಂದೆ ಸತೀಶ ಜಾರಕಿಹೊಳಿ ರವರ ರೀತಿಯಲ್ಲೇ ಅವರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಕೊಂಡು ನಿರಂತರವಾಗಿ ಸಮಾಜಸೇವೆ ಸಾಮಾಜಿಕ ಕಾರ್ಯಕ್ರಮ ಹಾಗೂ ಜನರ ಅಹವಾಲುಗಳನ್ನು ಬೆನ್ನತ್ತಿ ನ್ಯಾಯ ಕೊಡಿಸುವ ಕೆಲಸ ಮಾಡಿ ಮಾದರಿಯಾಗಿದ್ದಾರೆ ಎಂದು ಮಹೇಶ್ ಶೀಗೆಹಳ್ಳಿ ಹೇಳಿದ್ದಾರೆ.
ಇಂತಹ ಸಾಮಾಜಿಕ ಜವಾಬ್ದಾರಿ ಇರುವ ಯೂತ್ ಐಕಾನ್ ಗೆ ಅವಕಾಶ ನೀಡಿ 2024ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಲು ಪ್ರತಿ ಒಬ್ಬರು ವಿವಿಧ ಸಂಘಟನೆಯ ಹಿರಿಯ ಮುಖಂಡರು ಯುವ ಮುಖಂಡರು ಎಲ್ಲ ಸಮುದಾಯದ ಜನರು ಶ್ರಮಿಸೋಣ ಪ್ರಿಯಾಂಕ ಜಾರಕಿಹೊಳಿ ಈ ಬಾರಿಯ 2024ರ ಲೋಕಸಭಾ ಚುನಾವಣೆಯಲ್ಲಿ ಮಾದರಿಯ ಅಭಿವೃದ್ದಿಗಾಗಿ ಗೆಲ್ಲಿಸೋನ ಎಂದು ಮಹೇಶ್ ಶೀಗೆಹಳ್ಳಿ ಹೇಳಿದ್ದಾರೆ.











