ನಗರದಲ್ಲಿ ಸದ್ದು ಮಾಡಿದ ಜೆಸಿಬಿ

ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬುಧವಾರ ಗೋವಾ ವೇಸ್ ವೃತ್ತದಲ್ಲಿ ನಡೆಸಿದ ಸಂದರ್ಭದಲ್ಲಿ ತೆರವು ಮಾಡಲು ಬಿಡುವುದಿಲ್ಲ ಅಂತಾ ಮಹಿಳೆಯರ ಪಟ್ಟ ಹಿಡಿದ ಘಟನೆ ನಡೆಯಿತು.

promotions

ಮನೆಯ ಮುಂಭಾಗದಲ್ಲಿ ಧರಣಿ ಕುಳಿತು ಕಣ್ಣೀರಿಟ್ಟ ನಿವಾಸಿಗಳು. ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ಮಾತಿನಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡಲ್ಲಾ ಅಂತಾ ಪಟ್ಟು ಹಿಡಿದಿದ್ದರು.

promotions

ಬಿಜೆಪಿ ಸರ್ಕಾರ ಮುಸ್ಲಿಂರಿಗೆ ಅನ್ಯಾಯ ಮಾಡುತ್ತಿದೆ ಎಂದು‌ ಘೋಷಣೆ ಕೂಗಿದರು. ಐದಕ್ಕೂ ಅಧಿಕ ಮನೆಗಳು, ಗ್ಯಾರೇಜ್, ಗುಜ್ಜರಿ ಅಂಗಡಿ ತೆರವು ಮಾಡಲಾಯಿತು.

ಮಹಾನಗರ ಪಾಲಿಕೆಯ ಖಾಲಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಆರೋಪದಿಂದ ಮಹಾನಗರ ಪಾಲಿಕೆಯಿಂದ ಜೆಸಿಬಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

Read More Articles