ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಲೇಬೇಕು: ಸರ್ಕಾರಕ್ಕೆ ಕರವೇ ಎಚ್ಚರಿಕೆ!

ಬೆಳಗಾವಿ:ಬ್ಯಾಂಕಿಂಗ್, ಐಟಿ, ಸರ್ಕಾರಿ ಮತ್ತು ಹೊರಸರ್ಕಾರಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಹೊಸ ಕಾನೂನು ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಜಾರಿಯಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ  ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಗ್ರಹಿಸಿದ್ದಾರೆ. 

ಈ ಕಾನೂನು ಕುರಿತು ಪ್ರಮುಖ ಚರ್ಚೆ ನಡೆದಿದೆ ಮತ್ತು ಇಂದು ರಾಜ್ಯಾದ್ಯಂತ ಮುಷ್ಕರ ನಡೆಸಲಾಗಿದೆ. ಕನ್ನಡಿಗರಿಗೆ ಎಲ್ಲಾ ಉದ್ಯೋಗ ಕ್ಷೇತ್ರಗಳಲ್ಲಿ ನ್ಯಾಯಯುತ ಅವಕಾಶಗಳು ದೊರಕಬೇಕಿದೆ,ಎಂದು ಗುಡಗನಟ್ಟಿ ಹೇಳಿದ್ದಾರೆ. ಗುಡಗಿನಟ್ಟಿ ಕರ್ನಾಟಕದಲ್ಲಿ ಡಾ. ಸರೋಜಿನಿ ವರದಿ ಪ್ರಾರಂಭಿಸುವ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ. ಈ ಯೋಜನೆ ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಕನ್ನಡಿಗರನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಾಯ ಮಾಡುವ ನಿರೀಕ್ಷೆ ಇದೆ. ಎಲ್ಲ ರಾಜಕೀಯ ನಾಯಕರು ಬೆಂಬಲ ನೀಡಬೇಕೆಂದು ದೀಪಕ ಮನವಿ ಮಾಡಿದ್ದಾರೆ.

ಈ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ಏಕಮತ ಬೆಂಬಲ ಅತ್ಯಾವಶ್ಯಕವಾಗಿದೆ ಎಂದು ಅವರು ನಂಬಿದ್ದಾರೆ.
ಇಂದು ಮುಷ್ಕರದಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಿಂದ ಜನರು ಭಾಗವಹಿಸಿ, ಕನ್ನಡಿಗರಿಗೆ ಉದ್ಯೋಗ ಅವಕಾಶಗಳಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಸ್ತಾಪಿತ ಕಾನೂನು ಮತ್ತು ಇಂದಿನ ಮುಷ್ಕರವು ಕನ್ನಡಿಗರ ಉದ್ಯೋಗ ಹಕ್ಕುಗಳನ್ನು ಮತ್ತು ಕನ್ನಡಿಗರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

promotions

Read More Articles