ಗೋವಾ ಬಸ್ ತಡೆದು ಕರವೇ ಪ್ರತಿಭಟನೆ

ಬೆಳಗಾವಿ : ಮಹದಾಯಿ ಜಲಾನಯನ ಪ್ರದೇಶಕ್ಕೆ ಪ್ರವಾಹ ತಂಡ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿಗೋವಾ ಬಸ್ ತಡೆದು ಕರವೇ ಕಾರ್ಯಕರ್ತರು, ರೈತರು ಮುಖಂಡರು ಪ್ರತಿಭಟನೆ  ನಡೆಸಿದರು.

promotions

ಕೈಯಲ್ಲಿ ಬುಟ್ಟಿ, ಪಿಕಾಸಿ ಹಿಡಿದು ಸುರಿಯುವ ಮಳೆಯಲ್ಲಿ ರೈತ ಮುಖಂಡರು,ಕರವೇ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು‌. 

promotions

ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮತ್ತು ಗೋವಾ ಸಿಎಂ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಗೋವಾ ಬಸ್ ಏರಿ ಮಹಿಳಾ ಕರವೇ ಕಾರ್ಯಕರ್ತೆ ಹೈಡ್ರಾಮಾ ನಡೆಸಿದರು.

Read More Articles