ದಲಿತ ಸಮುದಾಯದ ಮೇಲೆ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಕರ್ನಾಟಕ ಭೀಮ್ ಸೇನೆ

ಬೆಳಗಾವಿ : ಜಿಲ್ಲೆಯ ಕುಕುಡೋಳ್ಳಿ ಗ್ರಾಮದ ಸರ್ವೇ ನಂ,16,17,18,19, 11 ದಲಿತ ಸಮುದಾಯದ ರೈತರ ಜಮೀನುಗಳಿದ್ದು, ಕೃಷಿ ಕೆಲಸಕ್ಕೆ ಅಡ್ಡಿ  ಪಡಿಸುವ ಮೇಲ್ಜಾತಿಯ ಕೆಲವು ಜಮೀನ್ದಾರರು ಮಳೆಗಾಲದಲ್ಲಿ ಚಳಿಗಾಲದಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ, 2-3 ಕಿಮಿ ಬೇರೆಯವರ ಜಮೀನಿನಲ್ಲಿ ಪ್ರತಿದಿನ ಕದ್ದುಮುಚ್ಚಿ ಅಲೆದಾಟ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ, ಅಲ್ಲಿ ಸಾಕಷ್ಟು ಅಕ್ಕಪಕ್ಕದ ಜಮಿನಾದರರು ಮೇಲ್ಜಾತಿಗೆ ಸೇರಿದವರಾಗಿದ್ದು,ಕೇಳ ಸಮುದಾಯ SC ST ಜನರು ತಮ್ಮ ಜಮೀನಿನಲ್ಲಿ ಹಾದು ಹೋಗುದಂತೆ, ಅವಾಚ್ಯ ಶಬ್ದಗಳಿಂದ, ಜಾತಿ ತಾರತಮ್ಯದಿಂದ ಜಾತಿ ನಿಂದನೆ ಕೂಡಾ ಮಾಡಿರುತ್ತಾರೆ ಎಂದು ಹೇಳಿದ್ದಾರೆ,ಈ ವಿಷಯ ಕೆಳ ಸಮುದಾಯ ದಲಿತ ರೈತರು ಬಹಿರಂಗಪಡಿಸದೆ ಮೇಲ್ಜಾತಿಯ ದೌರ್ಜನ್ಯ ದಬ್ಬಾಳಿಕೆ, ತಮ್ಮ ತಮ್ಮ ಜಮೀನುಗಳಿಗೆ ದಾರಿ ಕೊಡ್ತಾರೆಯೆಂದು ಸಹಿಸಿಕೊಂಡಿರುತ್ತಾರೆ ಎಂದು ಹೇಳಿದ್ದಾರೆ.

promotions

ಸಾಕಷ್ಟು ವರ್ಷಗಳಿಂದ, ಹಿರಿಯರ ಕಾಲದಿಂದಲೂ ಸರ್ವೇ ನಂ 10 ರಲಿ ಹಾಯ್ದು ನಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ಹಾಗೂ ಬೆಳೆದ ಬೆಳೆಯನ್ನು ಸಾಗಾಟ ಮಾಡಲು ಚಕ್ಕಡಿ ಬಂಡಿ ಮತ್ತು ಇನ್ನಿತರ ವಾಹನಗಳು ಸಂಚರಿಸುತ್ತಿದು.ಈಗ ಸರ್ವೇ ನಂ 10 ರ ಜಮೀನು ಮಾಲಿಕರಾದ ಶ್ರೀಮತಿ ಶಾಹಿಸ್ತಾ ಮಹ್ಮದ ಇಕ್ಬಾಲ್ ಅನಸಾರಿ ತಮ್ಮ ಜಮೀನು ನೋಡಲಿಕ್ಕೆ ಬಿಹಾರಿ ವ್ಯಕ್ತಿಗಳಿಂದ ಹೋಲಕೆ ಹೋಗುವ ದಾರಿಯಲ್ಲಿ ದೊಡ್ಡ ಗುಂಡಿ ತೋಡಿ ದಾರಿಯನು ಬಂದು ಮಾಡಿರುತ್ತಾರೆ ಹೇಳಿದ್ದಾರೆ.

promotions

ಈ ವಿಚಾರವಾಗಿ ಸಂಬಂಧ ಪಟ್ಟ ಎಲ್ಲ ಇಲಾಖೆಗಳಲ್ಲಿ, ದಿನಾಂಕ 01/02/23 ರಂದು ಮನವಿ ಮಾಡಿರುತ್ತೇವೆ, ಆದರೆ ಅಲ್ಲಿಂದ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯೂ ಬಂದು ಸ್ಥಳ ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಸುತ್ತೋಲೆಯಲ್ಲಿ, ರೈತರು ವ್ಯವಸಾಯದ ಉದೇಶಗಳಿಗಾಗಿ ತಿರುಗಾಡಲು ಬಳಸಲು ಖಾಸಗಿ ಜಮೀನುಗಳಲ್ಲಿ ಕಾಲು ದಾರಿ,ಬಂಡಿ ದಾರಿ, ಸೌಲಭ್ಯ ಒದಗಿಸಬೇಕೆಂದು. ಸಾಕಷ್ಟು ದಲಿತ ಸಮುದಾಯದ ಜಮಿನುದಾರಿಗೆ ಅನ್ಯಾಯವಾಗುತ್ತಿದೆ, ಹಾಗಾಗಿ ಜೀವನೋಪಾಯ ನಡೆಸುವುದು ಕಷ್ಟಕರವಾಗಿದೆ, ಆದರಿಂದ ತಾವು ಮಧ್ಯಸ್ಥಿಕೆ ವಹಿಸಿ, ದಲಿತ ಸಮುದಾಯದ ರೈತರಿಗೆ ಅನುಕೂಲ ಮಾಡಿಕೊಡಬೇಕು, ತೊಂದರೆ ಮಾಡುವವರು ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿಬೇಕೆಂದು ,ಯುವ ಕರ್ನಾಟಕ ಭೀಮ್ ಸೇನೆ ರಾಜ್ಯ ಸಮಿತಿಯ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ರಾಜ್ಯ ಉಪಾಧ್ಯಕ್ಷ ಅಕ್ಷಯ್ ಕೆ ಆರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಪ್ಪ ಅಕ್ಕಮಡಿ, ರಾಜ್ಯ ಜಂಟಿ ಕಾರ್ಯದರ್ಶಿ ಅಜೇಯ, ರಾಜ್ಯ ಖಜಾಂಚಿ ನಿಖಿಲ್ ಕೋಲಕಾರ ಶಿಂಗೆ, ರಾಜ್ಯ ಕಾರ್ಯದರ್ಶಿ ಪ್ರಮೋದ್ ಮರನಾಯಕ, ದೀಪಕ ಕಾಂಬಳೆ, ನೈಯಿಮ ಮುಜಾವರ ಬೈಲಹೊಂಗಲ ತಾಲೂಕು ಅಧ್ಯಕ್ಷ ಉದಯ ಬಸೋಜಿ ಬೈಲಹೊಂಗಲ ಉಪಾಧ್ಯಕ್ಷರು ಗಂಗಾಧರ ಮಾದರ,ಸಚೀನ ಕೋಲಕಾರ ಹರೀಶ್ ಈರಣಿ ಬೈಲಹೊಂಗಲ ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ದೋಡ್ಡಯಲಪಗೋಳ್ಳ, ಬೆಳಗಾವಿ ತಾಲೂಕು ಅಧ್ಯಕ್ಷರ ರಾಕೇಶ್ ಶಿಂಗೆ, ಬೆಳಗಾವಿ ತಾಲೂಕು ಉಪಾಧ್ಯಕ್ಷ ಪ್ರಮೋದ್ ಶಿಂಗೆ ಬೆಳಗಾವಿ ತಾಲೂಕು ಪ್ರಧಾನ ಕಾರ್ಯದರ್ಶಿ ದಿಲೀಪ ಕೋಲಕಾರ ಹಾಗೂ ಸಂಘಟನೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More Articles