ಆಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ವಿರುದ್ಧ ದನಿ ಎತ್ತಿದ ಕರ್ನಾಟಕ ಭೀಮ ಸೇನೆ

ಬೆಳಗಾವಿ : ಖಾನಾಪುರ ತಾಲ್ಲೂಕಿನ ಹಲಸಿ ಪ್ರಸಿದ್ಧ ಪ್ರವಾಸಿ ಮಂದಿರವಾಗಿದೆ. ಇಲ್ಲಿ ದಿನನಿತ್ಯ ಸಾರ್ವಜನಿಕರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ರಾಮತೀರ್ಥ ದೇವಸ್ಥಾನ ಅಕ್ಕಪಕ್ಕದಲ್ಲಿ ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆ ಹಗಲು ದರೋಡೆ ದಿನನಿತ್ಯ ವ್ಯಾಪಕವಾಗುತ್ತಿದೆ ಎಂದು ಕರ್ನಾಟಕ ಭೀಮ ಸೇನೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ.

promotions

ಇದರಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ ಸ್ಥಳೀಯ ಅರಣ್ಯ ಅಧಿಕಾರಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಾಲ್ಲೂಕಿನ ಅಧಿಕಾರಿಗಳು ಸುಮ್ಮನಾಗಿದ್ದಾರೆ ಎಂದು ನಮಗೆ ಸಂಶಯವಿದೆ ಎಂದು ಹೇಳಿದ್ದಾರೆ.

promotions

ಅರಣ್ಯ ಕಾಪಾಡುವ ಆರಕ್ಷಕರಿಗೆ  ಈ ದಂದೆ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಅಕ್ರಮಗಳನ್ನು ತಡೆಯುತ್ತಿಲ್ಲ. ಇದರ ಬಗ್ಗೆ ಕರ್ನಾಟಕ ಭೀಮ ಸೇನೆ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನೈಜ ಫೋಟೋ ತಗೆದುಕೊಂಡು ಇರ ಬಗ್ಗೆ ಮೇಲಾಧಿಕಾರಿಗಳಾದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ಕರೆ ಮಾಡಿ ತಿಳಿಸಿದರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದ್ದಾರೆ.

ಮರಳು ಮತ್ತು ಕಲ್ಲು ಗಣಿಗಾರಿಕೆ ಇತ್ತಿಚೀನ ದಿನಗಳಲ್ಲಿ ಇಂತಹ ಕೃತ್ಯುಗಳು ಖಾನಾಪೂರ ತಾಲ್ಲೂಕಿನ ಅರಣ್ಯ ಮದ್ಯದಲ್ಲಿ ಸಾಕಷ್ಟು ನಡೆಯುತ್ತಾ ಇದ್ದರೂ ಕೂಡಾ  ಸುದ್ದಿ ವಾಹಿನಿಗಳು  ಸಾಕಷ್ಟು ಭಾರಿ ಸುದ್ದಿ ಮಾಡಿದರೂ ಕೂಡ ಇದರ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಹಾಗಾಗಿ  ಸ್ಥಳ ವಿಕ್ಷಣೆ ಮಾಡಿ ಇದರ ಬಗ್ಗೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಭೀಮ ಸೇನೆಯಿಂದ ಒತ್ತಾಯಿಸಿದೆ.

ಇನ್ನು ಕೇವಲ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದಾದ್ಯಂತ ಕರ್ನಾಟಕ ಭೀಮ ಸೇನೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

Read More Articles