ಕರಾಳ ದಿನಾಚರಣೆಯ ವೇದಿಕೆ ನುಗ್ಗಿ ನಾಡ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಸಿದ್ಧ : ಕರ್ನಾಟಕ ನವನಿರ್ಮಾಣ ಸೇನೆ
- Shivaraj Bandigi
- 15 Jan 2024 , 2:13 AM
- Belagavi
- 390
ಬೆಳಗಾವಿ : ಕನ್ನಡಿಗರ ನಾಡ ಹಬ್ಬವಾದ ನವೆಂಬರ್ ೧ ರಂದು ಗಂಡು ಮೆಟ್ಟಿನ ನಾಡು ಬೆಳಗಾವಿಯಲ್ಲಿ ರಣ ಹೇಡಿನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಲು ಉದ್ದೇಶಿಸಿರುವ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಸಿಂಧೆ ಮಹಾರಾಷ್ಟ್ರ ಸರಕಾರದ ಪ್ರತಿನಿಧಿಯನ್ನು ಕಳಿಸುವುದಾಗಿ ಹೇಳಿರುವುದನ್ನು ಕರ್ನಾಟಕ ನವನಿರ್ಮಾಣ ಸೇನೆ ಬಲವಾಗಿ ಖಂಡಿಸಿದೆ.

ಬೆಳಗಾವಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಪುಂಡಪೋಕರಿಗಳನ್ನು ಬೆಳಗಾವಿ ಗಡಿಯೊಳಗೆ ನುಸುಳಿ ಬರದಂತೆ ನಿರ್ಬಂಧ ಹೇರ ಬೇಕು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಸಿಂಧೆ ಹೇಳಿಕೆ ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸಿದೆ.

ಪ್ರತಿವರ್ಷ ನವೆಂಬರ್ ೧ ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟ ಮಾಡಿ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಕೆಲಸ ಮಾಡುತ್ತಲೇ ಬರುತ್ತಿದೆ,ಜಿಲ್ಲಾಡಳಿತ ಮತ್ತು ಸರಕಾರ ಅನುಮತಿ ನಿರಾಕರಿಸುವುದಾಗಿ ಹೇಳುತ್ತಲೇ ಕೊನೆಯ ಕ್ಷಣದಲ್ಲಿ ಷರತ್ತು ಬದ್ಧ ಅನುಮತಿ ನೀಡುವ ದ್ರೋಹದ ಕೆಲಸ ಮಾಡುತ್ತಿದೆ.ಇದು ನಿಜಕ್ಕೂ ನಾಡ ದ್ರೋಹದ ಕೆಲಸ,ಕನ್ನಡಿಗರ ಸರಕಾರ,ಜಿಲ್ಲಾಡಳಿತ ಕನ್ನಡಿಗರಿಗೆ ದ್ರೋಹ ಮಾಡುವ ಮಾಡಬಾರದು ಕನ್ನಡಿಗರಿಗೆ ದ್ರೋಹ ಬಗೆಯುವ ಕೆಲಸದಿಂದ ಹಿಂದೆ ಸರಿಯಬೇಕು ಎಂದು ಕೇಳಿದೆ.
ಜಿಲ್ಲಾಡಳಿತ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಳಗಾವಿಯಂದ ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕು ಬೆಳಗಾವಿ ಸೂರ್ಯಚಂದ್ರರಿರುವವರೆಗೂ ಕನ್ನಡದ್ದೇ ನೆಲ ಜಿಲ್ಲಾಡಳಿತ ಕನ್ನಡಿಗರ ಸ್ವಾಭಿಮಾನ ಕೆಣಕುವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.
ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಮತ್ತು ಮಹಾರಾಷ್ಟ್ರದ ಪ್ರತಿನಿಧಿಯನ್ನು ಬೆಳಗಾವಿ ಗಡಿ ಪ್ರವೇಶಿಸಲು ಬಿಡಬಾರದು ಎಂದು ಖಡಕ್ಕಾಗಿ ಹೇಳಿದ್ದಾರೆ.
ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ದೇ ಆದರೆ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮಹಾರಾಷ್ಟ್ರದಿಂದ ಆಗಮಿಸುವ ಪ್ರತಿನಿಧಿಗೆ ಮಸಿ ಬಳಿದು ಕರಾಳ ದಿನಾಚರಣೆಯ ವೇದಿಕೆ ನುಗ್ಗಿ ನಾಡ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಸಿದ್ಧವಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಏನಾದರೂ ಅನಾಹುತ ನಡೆದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಹೋಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದ್ದಾರೆ.
ಬಾಬು ಸಂಗುಂಡಿ , ವಿನೋದ ಗುಂಡಪ್ಪನವರ ,ರೋಹಿತ್ ಅಂಗೋಳ್ಕರ್ ,ವಿಶಾಲ್ ಅಂಗೋಳ್ಕರ್ ,ಪ್ರವೀಣ ಬಡಿಗೇರ್ , ಚೇತನ ತಳವಾರ್ , ಸುಮಿತ್ ಅಂಗೋಳ್ ಉಪಸ್ಥಿತರಿದ್ದರು.










