ಕವಿತಾಳ : ರಸ್ತೆ ಅಪಘಾತಕ್ಕೆ ವಾಹನಗಳ ಅಡ್ಡಾ-ದಿಡ್ಡಿ ನಿಲುಗಡೆ ಕಾರಣ
- Shivaraj Bandigi
- 15 Jan 2024 , 1:53 AM
- Raichur
- 200
ಕವಿತಾಳ:-ಪಟ್ಟಣವು ರಾಯಚೂರು ಮತ್ತು ಲಿಂಗಸಗೂರು ಹೆದ್ದಾರಿಯಲ್ಲಿದ್ದು. ಪಟ್ಟಣದಲ್ಲಿ ಸಂಚಾರ ಮಾಡುವ ಪಾದಚಾರಿಗಳಿಗೆ ಫುಟ್ ಪಾತ್ ಇಲ್ಲದೇ ಇರುವುದು ವಿಪರ್ಯಾಸವೇ ಸರಿ.

ಪಾರ್ಕಿಂಗ್ ವ್ಯವಸ್ಥೆಯಂತೂ ಇಲ್ಲವೆ ಇಲ್ಲ, ಪಾದಚಾರಿಗಳ ರಸ್ತೆಯನ್ನು ಕೆಲ ವರ್ತಕರು ತಮ್ಮದೇ ಸ್ವಂತ ಆಸ್ತಿ ಎಂಬಂತೆ ಆಕ್ರಮಿಸಿಕೊಂಡಿದ್ದಾರೆ, ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಹಳೆ ಬಸ್ ನಿಲ್ದಾಣ ಹಾಗೂ ಲಿಂಗಸುಗೂರು ರಸ್ತೆಯ ಸರ್ಕಾರಿ ಬಾಲಕರ ಪ್ರೌಢ ಶಾಲೆಯವರೆಗೂ ರಸ್ತೆ ಸಂಪೂರ್ಣವಾಗಿ ಸಂಚಾರದ ವ್ಯವಸ್ಥೆ ಆದಗೆಟ್ಟಿದ್ದು ಬೈಕ್ ಸವಾರರೂ ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸುತ್ತಿದ್ದು.

ಮೇಲಾಗಿ ಕವಿತಾಳ ಪಟ್ಟಣವು ರಾಯಚೂರು ಲಿಂಗಸುಗೂರು ರಸ್ತೆಗೆ ಹೊಂದಿಕೊಂಡಿದ್ದರು ಸಹ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ,ಇದರಿಂದ ಪಾದಾಚಾರಿಗಳಿಗೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಉಂಟಾಗಿದೆ, ಇದಕ್ಕೆ ಪಟ್ಟಣದಲ್ಲಿ ಯಾವುದೇ ರೀತಿಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಮುಖ್ಯ ಕಾರಣವಾಗಿದೆ,ಪಟ್ಟಣಕ್ಕೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಆಗಮಿಸುತ್ತಾರೆ,ಬಸ್ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಓಡಡುವ ವಿದ್ಯಾರ್ಥಿಗಳು ಪ್ರಾಣ ಭಯದಲ್ಲಿಯೇ ಓಡಾಡುತ್ತಿದ್ದರೆ.
ಪಾದಚಾರಿಗಳಿಗೆ ಮಾರ್ಗವಿಲ್ಲ ಪಟ್ಟಣದಲ್ಲಿ ಹಾದು ಹೋಗಿರುವುದು ಸಮಾನ್ಯ ರಸ್ತೆಯಲ್ಲ ಇದು ರಾಯಚೂರು ಲಿಂಗಸುಗೂರು ಹೆದ್ದಾರಿ ಹೀಗಿದ್ದರೂ ಸಹಿತ ಪಾದಚಾರಿಗಳಿಗೆ ಫುಟ್ ಪಾತ್ ವ್ಯವಸ್ಥೆ ಇಲ್ಲ,ಇರುವ ಅಲ್ಪ ರಸ್ತೆಯನ್ನೇ ವ್ಯಾಪಾರಸ್ಥರು ಆಕ್ರಮಿಸಿಕೊಂಡು ತಮ್ಮ ಅಂಗಡಿ ಮುಂಗಟ್ಟಿನ ಸಾಮಾನುಗಳನ್ನು ರಸ್ತೆಯಲ್ಲಿ ಇರಿಸಿ ಪಾದಚಾರಿ ಮಾರ್ಗವೇ ತಮ್ಮದೆಂಬಂತೆ ವರ್ತಿಸುತ್ತಿದ್ದರೆ.
ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ ಹಳ್ಳಿಗಳ ಜನರು ಬರವದು ಸಮಾನ್ಯ ಹಿಗಿರುವಾಗ ಬೈಕ್ ಆಟೋ ರಿಕ್ಷಾ ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆ ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಉಂಟಾಗುತ್ತಿದೆ.
ಸಂತೆ ಮಾರುಕಟ್ಟೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ ಪೋಲಿಸ್ ಸಿಬ್ಬಂದಿಗಳಾಗಲಿ ಯಾರು ಇದರ ಬಗ್ಗೆ ಗಮನ ಹರಿಸದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.










