ಅಗೆದ ರಸ್ತೆಗೆ ಕಾಯಕಲ್ಪ ಎಂದು?

ಬೈಲಹೊಂಗಲ- ಸರ್ಕಾರಗಳು ಜನರ ಅನೂಕೂಲಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದರೂ ಸಹ ಕಾಮಗಾರಿ ನಡೆಸುವ ಗುತ್ತಿಗೆದಾರ ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. 

promotions

ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹಾಗೂ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ತಾಲೂಕಿನ, ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಮೇಕಲಮರಡಿ ಗ್ರಾಮದ ಮೂಲಕ ವಣ್ಣೂರ ಗ್ರಾಮವನ್ನು ಸಂದಿಸುವ ಸುಮಾರು 8 ಕಿಮೀ ಗ್ರಾಮೀಣ ರಸ್ತೆ ಕಳೆದ ಎರಡು ವರ್ಷದ ಹಿಂದೆ ಅಗೆದು ದುರಸ್ತಿ ಮಾಡಲಾಗಿದೆ. 

promotions

ರಸ್ತೆ ಕಾಮಗಾರಿ ಚನ್ನಾಗಿ ಆಗಿದ್ದರೂ ಸಹ ವಣ್ಣೂರ ಗ್ರಾಮದ ಬಳಿ ಕೇವಲ 500ಮೀ ರಸ್ತೆ ಹಾಗೇಯೇ ಬಿಡಲಾಗಿದೆ. ಇದರಿಂದ ವಾಹನ‌ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. 

8 ಕಿ.ಮೀ ರಸ್ತೆ ಕಾಮಗಾರಿ ಮಾಡಿದ್ದರೂ ಸಹ ಇಷ್ಟೇ ರಸ್ತೆಯ ದುರಸ್ತಿ ಕಾಮಗಾರಿವಯಾವ ಕಾರಣಕ್ಕಾಗಿ ಮಾಡಲಾಗಿಲ್ಲ ಎಂಬುವದು ಇಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. 

ಅಲ್ಲದೆ ಈ ರಸ್ತೆಯು ಬೈಲಹೊಂಗಲ ಪಟ್ಟಣದಿಂದ ಈಗೀನ ಲೋಕೋಪಯೋಗಿ ಸಚಿವರ ತವರೂರು ಗೋಕಾಕ ನಗರವನ್ನು ಸಂದಿಸುವ ರಸ್ತೆಯಾಗಿದ್ದು ದಿನನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಉದ್ಯೋಗ, ಶಿಕ್ಷಣ ಮುಂತಾದ ಕೆಲಸಗಳಿಗೆ ಈ ರಸ್ತೆಯನ್ನೆ ಅವಲಂಬಿಸಿದ ಜನರ ಪಾಡು ಹೇಳತೀರದಂತಾಗಿದೆ. ಮಳೆಗಾಲದ ದಿನ‌ ಇಲ್ಲಿ ಸಂಚರಿಸುವದು ತುಂಬಾ ಕಠಿಣವಾಗಿದ್ದು ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕಾಗಿದೆ. 

ಹದಗೆಟ್ಟ ರಸ್ತೆಯ ಸುಧಾರಣೆ ಸಲುವಾಗಿ ಸಾಕಷ್ಟು ಸಲ ಮನವಿ ಕೊಟ್ಟು ರಸ್ತೆ ರಿಪೇರಿ ಮಾಡಿಸಲಾಗಿದೆ. ಆದರೆ ಯಾಕೋ ಗೊತ್ತಿಲ್ಲ ಎರಡು ವರ್ಷದದಿಂದ ಕಾಮಗಾರಿ ಚಾಲ್ತಿಯಲ್ಲಿದೆ ನಿಧಾನವಾಗಿ ಸಾಗಿ ಎಂಬ ಬೋರ್ಡ ಮಾತ್ರ ಕಾಣುತ್ತಿದ್ದು ಕಾಮಗಾರಿ ಅಂತೂ ಪೂರ್ಣಗೊಂಡಿಲ್ಲ....

ಮನೋಜ ಕೆಳಗೇರಿ ದಲಿತ ಮುಖಂಡ ವಣ್ಣೂರ.

ವರದಿ : ರವಿಕಿರಣ್  ಯಾತಗೇರಿ 

Read More Articles