ರಾಜ್ಯ, ಕೇಂದ್ರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ

ಬೆಳಗಾವಿ : ಕಳೆದ ಇಪ್ಪತ್ತು ದಿನದ ಹಿಂದೆ ನಾನು ಧಾರವಾಡದಲ್ಲಿ ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗರುಜ್ಜಿನುಗಳು ಹೆಚ್ಚಾಗುತ್ತವೆ ಅಂತಾ ಹೇಳಿದ್ದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೆಂದ್ರ ಸ್ವಾಮಿ ಹೇಳಿದರು. 

promotions

ಇದು ಇಂಡಿಯಾ ಅಂತ ಅಷ್ಟೇ ಹೇಳಿರಲಿಲ್ಲ ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತಾ ಹೇಳಿದ್ದೆ ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತೆ ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ ಇದು ಕ್ರೋಧಿನಾಮ ಸಮಸ್ತರ,ಕ್ರೋಧ ಅಂದರೆ ಸಿಟ್ಟು ಇದರಲ್ಲಿ ಒಳ್ಳೆಯದು ಕೆಟ್ಟದ್ದು ಇದೆ ಆ ಪೈಕಿ ಕೆಟ್ಟದ್ದೆ ಜಾಸ್ತಿ ಇರುತ್ತೆ ಎಂದರು. 

promotions

 ಪ್ರಾಕೃತಿಕ ದೋಷ ಮುಂದುವರೆಯುತ್ತದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ, ರಾಜ್ಯ ರಾಜಕಾರಣದಲ್ಲಿ ಬದಲಾವಣೆ ವಿಚಾರಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ ಅವರು.

ಒಬ್ಬ ಸನ್ಯಾಸಿ ತಪ್ಪಿಸಿಗೆ ಕುಳಿತಿದ್ದನಂತೆ, ಆಗ ಒಬ್ಬ ಬೇಡ ಬೇಟೆಗೆ ಜಿಂಕೆಯನ್ನ ಓಡಿಸಿಕೊಂಡು ಬಂದನ್ನಂತೆ ಸ್ವಾಮೀಜಿ‌ ಮುಂದೆ ಜಿಂಕೆ ಹೋಯಿತಂತೆ ಆಗ ಸ್ವಾಮೀಜಿಯನ್ನ ಜಿಂಕೆ ಹೋಯಿತಾ ಅಂತ ಬೇಡ ಕೇಳಿದನ್ನಂತೆ ಆಗ ಸನ್ಯಾಸಿ ಹೋಯಿತು ಅಂತಾ ಹೇಳಿದ್ರೆ ಕೊಂದ ಪಾಪ ತಟ್ಟುತ್ತೆ, ಇಲ್ಲ ಅಂತಾ ಹೇಳಿದರೆ ಸುಳ್ಳು ಹೇಳಿದ ಪಾಪವೂ ತಟ್ಟುತ್ತೆ ಹೀಗಿದ್ದಾಗ ಯಾವುದು ನೋಡ್ತು ಅದಕ್ಕೆ ಮಾತು ಬರಲ್ಲ, ಯಾವ್ದು ಮಾತನಾಡ್ತು ಅದಕ್ಕೆ ಮಾತನಾಡಕ್ಕೆ ಬರಲ್ಲ ಎಂದಿದ್ದನಂತೆ ಸನ್ನಾಸಿ ಕಣ್ಣು ನೋಡ್ತು ಕಣ್ಣಿಗೆ ಮಾತು ಬರಲ್ಲ, ನಾಲಿಗೆ ಮಾತಾಡ್ತು ಆದರೆ ಅದು ನೋಡಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. 

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಏನು ತೊಂದರೆ ಕಾಣ್ತಿಲ್ಲ ಎಂದರು. 

ಜನರು ಎಲ್ಲವನ್ನೂ ಮನಶಾಂತಿಯಿಂದ ತೆಗೆದುಕೊಳ್ಳುತ್ತಿಲ್ಲ, ದ್ವೇಷ ಭಾಷೆಯಿಂದ ತೆಗೆದುಕೊಳ್ಳುತ್ತಿದ್ದಾರೆ, ಆತ್ಮಸಾಕ್ಷಿಯಾಗಿ ಜನರು‌ ಮತ ನೀಡುತ್ತಿಲ್ಲ, ಎಲ್ಲಿಯವರೆಗೆ ಮತ ಮಾರಾಟ ಮಾಡಿಕೊಳ್ಳುತ್ತಾರೆ, ಅಲ್ಲಿಯವರೆಗೆ ಲಾಭ ನಷ್ಟ ಇರುತ್ತೆ. 

ಹಿಂದಿನ‌ಕಾಲದಲ್ಲಿ ಧರ್ಮದ ಅನುಮತಿ ಪಡೆದು ರಾಜಕಾರಣ ಮಾಡುತ್ತಿದ್ದರು ಈಗ ಧರ್ಮವೂ ಇಲ್ಲ ಗುರಿಯೂ ಇಲ್ಲ, ದುಡ್ಡು ಮಾಡೋದಷ್ಟೇ ಗುರಿ, ಹಾಗಾಗಿ ಬಹುಬೇಗ ಇವರಿಗೆ ಅಪಘಾತಗಳು ಆಗುತ್ತವೆ ಎಂದರು. 

ಮನಷ್ಯ ಯಾವುದೇ ಅಪೇಕ್ಷೆ ಇಲ್ಲದೇ ಮತ ಹಾಕುತ್ತಾನೆ ಅಲ್ಲಿಯವರೆಗೆ ರಾಮರಾಜ್ಯ ಸಿಗಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ರೋಗರುಜ್ಜಿಗಳು ಸ್ವಲ್ಪ ಜಾಸ್ತಿಯಾಗುತ್ತೆ, ಅಲ್ಪಾಯಸ್ಸು ಕಡಿಮೆ ಆಗುತ್ತೆ, ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ ಬರುವ ದಿನಗಳು ಅಷ್ಟೊಂದು ಶುಭವಾಗಿಲ್ಲ ಒಳ್ಳೆಯದು ಇದ್ದಾವೆ, ಆದರೆ, ಬೆಳಕು ಕಪ್ಪು ಓರೆ ಮಾಡಿದಾಗ ಕಪ್ಪೆ ಜಾಸ್ತಿ ಎಂದರು.

Read More Articles