ಮಾನವೀಯತೆ ಮೆರೆದ ಕೆಆರಪಿಪಿ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ
- Krishna Shinde
- 14 Jan 2024 , 7:34 AM
- Belagavi
- 204
ಅಪಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ .

ಪ್ರಚಾರಕ್ಕೆಂದು ತೆರಳುವ ಸಂದರ್ಭದಲ್ಲಿ ಘಟ್ಟನಟ್ಟಿ ಗ್ರಾಮದ ಹತ್ತಿರ ರಸ್ತೆ ಬದಿಯಲ್ಲಿ ಬೈಕ್ ಅಪಘಾತವಾಗಿರುವ ವ್ಯಕ್ತಿಯನ್ನು ಕಂಡು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆಯ ಮೆರೆದಿದ್ದಾರೆ.

ಅಪಘಾತವಾದ ವ್ಯಕ್ತಿಯು ಸತ್ತಿ ಗ್ರಾಮದ ಮುರಳಿ ಜೋಶಿ ಎಂದು ಗುರುತಿಸಲಾಗಿದ್ದು ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಈ ಕಾರ್ಯವನ್ನು ಕಂಡ ಗ್ರಾಮಸ್ಥರು ಬಸವರಾಜ ಬಿಸನಕೊಪ್ಪ ಅವರಿಗೇ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.










