ವಿಕಲಚೇತನಿಗೆ ತ್ರಿಚಕ್ರ ವಾಹನ ಹಸ್ತಾಂತರಿಸಿದ ಲಕ್ಷ್ಮಣ ಸವದಿ

ಅಥಣಿ : ದೀಪಾವಳಿ ಹಬ್ಬದ ಉಡುಗೊರೆಯಾಗಿ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹಣಮಂತ ಕುರುಬರ ಎಂಬ ವಿಕಲಾಂಗ ಚೇತನ ಯುವಕನಿಗೆ ವೈಯುಕ್ತಿಕವಾಗಿ ಮಾಜಿ ಡಿಸಿಎಂ ‌ಹಾಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ತ್ರಿಚಕ್ರ ವಾಹನ ಹಸ್ತಾಂತರಿಸಿದರು.

promotions

ಇದೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ಕಳೆದ ಎರಡು ತಿಂಗಳ ಹಿಂದೆ ಖಾಸಗಿ ಸುದ್ದಿವಾಹಿನಿ ಕಾರ್ಯಕ್ರಮ ಒಂದರಲ್ಲಿ ವಿಕಲ ಚೇತನ ಹಣಮಂತ ಕುರುಬರ ತನ್ನ ಅಳಲನ್ನ ತೋಡಿಕೊಂಡಿದ್ದನ್ನ ಮನಗಂಡು ಹಣಮಂತನಿಗೆ ತ್ರಿಚಕ್ರ ವಾಹನ ನೀಡುವ ಭರವಸೆ ನೀಡಿದ್ದೆ ಅದರಂತೆ ಇಂದು ದೀಪಾವಳಿ ಹಬ್ಬದ ಉಡುಗೊರೆಯಾಗಿ ಹಣಮಂತನಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದ್ದು ಸಂತಸದ ವಿಷಯ, ಇಂಥಹ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲಾ ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ಇರುವ ವಿಕಲ ಚೇತನರನ್ನ ಗುರುತಿಸಿ ಅವರಿಗೆ ತ್ರಿಚಕ್ರ ವಾಹನ ಕಲ್ಪಿಸುವ ಭರವಸೆ ನೀಡಿದರು.

promotions

ಇದೆ ಸಂದರ್ಭದಲ್ಲಿ ಯುವ ಧುರಿಣ ಚಿದಾನಂದ ಸವದಿ, ಪುರಸಭೆ ಸದಸ್ಯರಾದ ರಾಜಶೇಖರ ಗೂಡೊಡಗಿ, ಕಲ್ಲೇಶ್ ಮಡ್ಡಿ, ನ್ಯಾಯವಾದಿ ನಿಂಗಪ್ಪಾ ಖೋಕಲೆ, ಮಾಹಾತೇಶ ಠಕ್ಕಣ್ಣವರ, ಆಸಿಫ್ ತಾಂಬೊಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More Articles