ಲಕ್ಷ್ಮೀ ಹೆಬ್ಬಾಳಕರ್ ಮಾನವೀಯತೆ: ಅಭಿಮಾನಿಯ ಅಪಘಾತ ಸುದ್ದಿ ಕೇಳಿ ಧಾವಿಸಿದ ಶಾಸಕಿ
- 18 Dec 2023 , 1:29 AM
- Belagavi
- 125
ಬೆಳಗಾವಿ : ತಮ್ಮ ಅಭಿಮಾನಿಯೊಬ್ಬರು ಅಪಘಾತಕ್ಕೊಳಗಾಗಿರುವ ಸುದ್ದಿ ಕೇಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಧಾವಿಸಿ ಹೋಗಿ ಅವರ ಕಷ್ಟಕ್ಕೆ ಸ್ಪಂದಿಸಿರುವ ಮಾನವೀಯ ವಿದ್ಯಮಾನ ಮಂಗಳವಾರ ನಡೆಯಿತು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಿಣಿಯೆ ಗ್ರಾಮದ ಶ್ರೀಧರ್ ಡುಕ್ರೆ ಎಂಬ ವ್ಯಕ್ತಿ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ವಿದ್ಯುತ್ ಕಂಬದ ಮೇಲಿಂದ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಕಾರಣ ಅಸ್ವಸ್ಥಗೊಂಡಿದ್ದಾರೆ. ಸುದ್ದಿ ತಿಳಿದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ, ಧೈರ್ಯ ತುಂಬಿದರು.

ಶ್ರೀಧರ್ ಡುಕ್ರೆ ಶಿಸ್ತಿನ ಸಿಪಾಯಿಯಂತೆ ಕೆಲಸ ನಿರ್ವಹಿಸುತ್ತಿದ್ದರು. ನಾನು ಕೀಣಿಯೆ ಗ್ರಾಮಕ್ಕೆ ಹೋದಾಗಲೆಲ್ಲ ನನ್ನನ್ನು ಕಂಡು ವಾತ್ಸಲ್ಯಭರಿತರಾಗಿ ಅಕ್ಕಾ ಅಕ್ಕಾ ಎಂದು ಮಾತನಾಡಿಸುತ್ತಿದ್ದರು, ಇವತ್ತು ಅವರ ಸ್ಥಿತಿ ನೋಡಿದರೆ ಕರುಳು ಕಿತ್ತು ಬರುವಂತಿದೆ. ಭಗವಂತನಲ್ಲಿ ನಾನು ಕೇಳಿಕೊಳ್ಳುವುದಿಷ್ಟೇ ಈ ವ್ಯಕ್ತಿ ಮೊದಲಿನಂತಾಗಲಿ, ಎಂದಿನಂತೆ ತನ್ನ ಕುಟುಂಬದ ಜೊತೆ ನಗುತಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದರು..










