ಬೀದಿ ಬದಿ ವ್ಯಾಪರಸ್ಥರಿಂದ ತಡರಾತ್ರಿ ದಿಢೀರ ಪ್ರತಿಭಟನೆ

ಬೈಲಹೊಂಗಲ :  ಪುರಸಭೆ ಸಿಬ್ಬಂದಿಗಳಿಂದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ, ಹಲ್ಲೆ ಖಂಡಿಸಿ ಪ್ರತಿಭಟಣೆ...

promotions

ತಡರಾತ್ರಿ ಏಕಾಎಕಿ ಪ್ರತಿಭಟನೆ ಮಾಡಿದ ವ್ಯಾಪಾರಸ್ಥರು .

promotions

ಬೈಲಹೊಂಗಲದ ಪುರಸಭೆಯ ಸಿಬ್ಬಂದಿಗಳಿಂದ ಬೀದಿ ಬದಿ ವ್ಯಾಪಾಸ್ಥರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಮಾಡಿರುವುದನ್ನು ಖಂಡಿಸಿ ತಡರಾತ್ರಿ ರಸ್ತೆ ಬಂದ್ ಮಾಡಿ ಪ್ರತಿಭಟಣೆ ಮಾಡಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಏಕಾಎಕಿ ಯಾರಿಗೂ ಹೇಳದೆ, ಕೇಳದೆ ಬೀದಿ ವ್ಯಾಪಾರಸ್ಥರ ಅಂಗಡಿಗಳನ್ನು ಎತ್ತಂಗಡಿ ಮಾಡುತ್ತಿದ್ದ ಸಿಬ್ಬಂದಿಗಳನ್ನು ವ್ಯಾಪಾರಸ್ಥರು ವಿಚಾರಿಸಿದಾಗ ಇಬ್ಬರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಅಕ್ರೋಶಗೊಂಡ ಬೀದಿ ಬದಿವ್ಯಾಪಾರಸ್ಥರು ದಿಢೀರ ಪ್ರತಿಭಟಣೆ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ದಬ್ಬಾಳಿಕೆ ಹಾಗೂ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು  ಆಗ್ರಹಿಸಿದ್ದಾರೆ. ಕ್ರಮ ಜರುಗಿಸದಿದ್ದರೆ ಬೈಲಹೊಂಗಲ ಬಂದ್ ಕರೆದು ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ. 

ಒಂದು ಗಂಟೆಗಳ ಕಾಲ ರಸ್ತೆ ತಡೆ ಮಾಡಿದರೂ ಸ್ಥಳಕ್ಕೆ ಬಾರದ ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. 
ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ ಸ್ಥಳಕ್ಕಾಗಮಿಸಿ  ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Read More Articles