ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ‌ಬಂದ್ ಮಾಡಿದ ವಕೀಲರು

ಬೆಳಗಾವಿ :ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರತಿಭಟನಾ ಮೆರವಣಿಗೆ ನಡೆಸಿ 
ಮ ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟ ಸಾವಿರಾರು ವಕೀಲರು ಹಾಗೂ ಪೊಲೀಸರ ನಡುವೆ ನೂಕು ನುಗ್ಗಾಟ ನಡೆಯಿತು.

promotions

ಕಾನೂನು ಸಚಿವ ಮಾಧುಸ್ಚಾಮಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಕಳೆದ ಹದಿನೈದು ನಿಮಿಷಗಳಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿವೆ‌.

promotions

ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಪ್ರತಿಭಟನಾ ರ್ಯಾಲಿ ಹಮ್ಮಿ ಕೊಂಡಿದ್ದ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹತ್ತಿಕ್ಕಲು ಕಾಯ್ದೆ ರೂಪಿಸುವಂತೆ ಆಗ್ರಹಿದರು‌.

ಚಳಿಗಾಲ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆಗೆ ಆಗ್ರಹ ಮಾಡಿದರಲ್ಲದೆ, ಸುವರ್ಣಸೌಧಕ್ಕೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರಿಗೆ ಮುತ್ತಿಗೆ ಹಾಕಿದ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗವಾಗಿ ವಕೀಲರ ಬೃಹತ್ ಪ್ರತಿಭಟನಾ ರ‌್ಯಾಲಿ. ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಬೆಳಗಾವಿ ಅಧಿವೇಶನದಲ್ಲಿ ಜಾರಿಗಾಗಿ ವಕೀಲರ ಆಗ್ರಹವಾಗಿದೆ.

Read More Articles