ಜನಾರ್ಧನ ರೆಡ್ಡಿ ಸಮ್ಮುಖದಲ್ಲಿ ಕೆಆರಪಿಪಿ ಸೇರ್ಪಡೆಗೊಂಡ ಬಿಜೆಪಿ ಮುಖಂಡೆ
- Krishna Shinde
- 14 Jan 2024 , 9:24 PM
- Koppal
- 223
ಗಂಗಾವತಿ : ಗಂಗಾವತಿ ನಗರದ 30ನೇ ವಾರ್ಡನ ಸದಸ್ಯೆ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡರಾದ ಸುಚೇತ ಕಾಶೀನಾಥ್ ಸಿರಿಗೆರೆ ಅವರು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಯಾದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನಗರಸಭೆ ಸದಸ್ಯೆ ಪಕ್ಷ ಸೇರ್ಪಡೆಗೊಂಡಿದ್ದು, ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸುಚೇತ ಸಿರಿಗೆರೆ ಅವರನ್ನು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಇಂದು ಬೆಳಿಗೆ 30ನೇ ವಾರ್ಡನಲ್ಲಿರುವ ಸುಚೇತ ಅವರ ನಿವಾಸಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನಗರದ ರಾಜಕೀಯ ಚಟುವಟಿಕೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ಮುಖಂಡರಾದ ಪಂಪಾಪತಿ ಸಿಂಗನಾಳ, ಸಂಜಯ ಬೆಟಗೇರಿ, ಪ್ರಕಾಶ್ ರೆಡ್ಡಿ, ಕಾಶಿನಾಥ ಸಿರಿಗೆರೆ, ವೀರೇಶ್ ಬಲಕುಂದಿ, ಯಮನೂರು ಚೌಡಕಿ, ರಾಜೇಶ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










