ಮನೆ-ಮನಗಳಲ್ಲಿ ರಾಷ್ಟ್ರಪ್ರೇಮ ರಾರಾಜಿಸಲಿ : ಗುರುಬಸವಲಿಂಗ ಶ್ರೀ ಕರೆ

ಬೆಳಗಾವಿ:" ಭಾರತೀಯರಾದ ನಾವು 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಯಶಸ್ವಿಗೊಳಸಬೇಕು. ದೇಶದ ಮೂಲೆ- ಮೂಲೆಯಲ್ಲಿ ರಾಷ್ಟ್ರಧ್ವಜ ರಾರಾಜೀಸಬೇಕಾದರೆ, ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಶ್ರೀ ಗುರುಬಸವಲಿಂಗ ಮಹಾಸ್ವಾಮೀಜಿಗಳು ಕರೆ ಕೊಟ್ಟರು.

promotions

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್‌ ಘರ್‌ ತಿರಂಗಾ’ ಅಭಿಯಾನದ ನಿಮಿತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ ಪಕ್ಷದಿಂದ ಅವರು ಯಮಕನಮರಡಿ ಕ್ಷೇತ್ರದಲ್ಲಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

promotions

ನಿಮ್ಮ ರಾಷ್ಟ್ರಭಿಮಾನ ಕಂಡು ಹೆಮ್ಮೆಯ ಆಗಿದೆ. ನಾವು ಸ್ವತಂತ್ರವಾಗಿ ಬದುಕಲು ಎಲ್ಲ ಸೌಲಭ್ಯಗಳಿವೆ ಅವುಗಳನ್ನು ಸದುಪಯೋಗಮಾಡಿಕೊಂಡು ದೇಶಕ್ಕೆ ನಮ್ಮದೇ ಕೊಡುಗೆ ನೀಡಬೇಕು.ತ್ಯಾಗ-ಬಲಿದಾನಗಳ ದೇಶ ಭಾರತ, ಇಂತಹ ಪುಣ್ಯ ಭೂಮಿಯಲ್ಲಿದ್ದು ದೇಶಸೇವೆ ಮಾಡುವ ಕಾರ್ಯಗಳಬೇಕು ಎಂದರು.

ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ದೇಶದ ಜನತೆಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದ್ದಾರೆ.

ಭಾರತದ ಎಲ್ಲಾ ಪ್ರಜೆಗಳಲ್ಲೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರೂ ಕೂಡಾ ಕೈಮಗ್ಗ ಅಥವಾ ವಿದ್ಯುತ್ ಮಗ್ಗದಿಂದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ರೇಷ್ಮೆ, ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರ ಧ್ವಜವನ್ನು ಆಗಸ್ಟ್ 13ರಿಂದ 15 ರವರೆಗೆ ಮೂರು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶ ಪ್ರೇಮ ಮೆರೆಯಬೇಕೆಂಬುದು ಎಂದು ಶ್ರೀಗಳು ಹೇಳಿದರು.

ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ಮೇರೆಗೆ ಯಮಕನಮರಡಿ ಕ್ಷೇತ್ರದ ಜಿಪಂ ಕ್ಷೇತ್ರದ ನಾಲ್ಕೈದು ಸಾವಿರ ಮನೆಗಳ ಮೇಲೆ ರಾಷ್ಟ್ರಧ್ವಜ ರಾರಾಜೀಸಬೇಕೆಂದು ಶಾಸಕರು ಕನಸಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಆಚರಿಸಿಸೋಣ, ಪ್ರತಿ ಮನೆಮನೆಗಳಲ್ಲೂ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕೆಂಬ ಕರೆ ಕೊಟ್ಟರು.

ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾದಯಾತ್ರೆ: ಕೆದನೂರ, ಕಡೋಲಿ , ಗುಂಜೆನಟ್ಟಿ, ಮನ್ನಿಕೇರಿ , ಮನ್ನಿಕೇರಿ, ಹಂದಿಗನೂರ ಅಗಸಗಾ , ಕುಡಕನಟ್ಟಿ, ಚೆಲವನಟ್ಟಿ, ಮಾಳಾನಟ್ಟಿ, ಅಲತಗಾ ಮಾರ್ಗದ ಉದ್ದಕ್ಕೂ ಪಾದಯಾತ್ರೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿದ್ದು ಸುಣಗಾರ , , ಅರುಣ ಕಂಟಾಬಳೆ , ಸುನೀಲ ಹನ್ನಮನವರ, ರಾಜು ಮಾಲಾಂಚಿ, ರಾಮಾ ಗುಳಿ ಹಾಗೂ ಇತರರು ಇದ್ದರು.

Read More Articles