ಕೇಂದ್ರದ ತಂಡ ಬೆಳಗಾವಿಗೆ ಬಂದು ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ಮಾಡಲಿ: ಟೋಪಣ್ಣವರ

ಬೆಳಗಾವಿ: ಬೆಳಗಾವಿ ಸ್ಮಾರ್ಟ್ ಸಿಟಿಯು ಮಹತ್ವದ ವಿಶ್ವಸಂಸ್ಥೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೆಸ್೯ ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುವುದು ಯಾವ ಮಾನದಂಡದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ತಂಡವನ್ನು ಬೆಳಗಾವಿಗೆ ಕಳುಹಿಸಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.

promotions

ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

promotions

ದೇಶದಲ್ಲಿ ದೊಡ್ಡ ಕಳಪೆ ಮಟ್ಟದ ಕಾಮಗಾರಿ ಬೆಳಗಾವಿಯಲ್ಲಿ ಆಗಿದೆ. ನಿಜವಾಗಿಯೂ ಜನರಿಗೆ ಅನಕೂಲವಾಗುವ ರೀತಿಯಲ್ಲಿ ಕೆಲಸವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ತಂಡ ಬೆಳಗಾವಿಗೆ ಕಳುಹಿಸಿ ಸ್ಮಾರ್ಟ್ ಸಿಟಿ ಕಾಮಗಾರಿಯ ತನಿಖೆ ಮಾಡಿ ರ್ಯಾಂಕ್ ನೀಡಬೇಕೆಂದು ಮನವಿ ಮಾಡಿದರು.

600 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಿಂದ ರಸ್ತೆ, ಒಳಚರಂಡಿ ನಿರ್ಮಾಣ ಮಾಡಿದರೂ ಅದು ಸರಿಯಾಗಿಲ್ಲ. ನಗರದಲ್ಲಿ ಸ್ಮಾರ್ಟ್ ಸಿಟಿಯವರು ಪಿಎಂಸಿ ಕಂಪನಿ, ಸ್ಥಳೀಯ ಶಾಸಕರು, ಹಾಗೂ ಶಾಸಕರು ನೇಮಕ ಮಾಡಿದ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

70 ಕೋಟಿ ರಾಜಕಾಲುವೆ ದುರಸ್ಥಿಗೆ ತೆಗೆದಿಟ್ಟ ಹಣ ರಸ್ತೆ ಪಕ್ಕದ ಒಳಚರಂಡಿಗೆ ಖರ್ಚು ಮಾಡಿ‌ ಹಾಳು ಮಾಡಿದ್ದಾರೆ. ಬೆಳಗಾವಿ ದಕ್ಷಿಣ ಭಾಗದಲ್ಲಿ ನಾಲಾ, ರಾಜಕಾಲುವೆಯ ಕಾಮಗಾರಿ ಸರಿಯಾಗಿಲ್ಲ. ಪ್ರಮುಖ ನಾಲಾ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗುವಂತಾಗಿದೆ. ಯಾವ ಶಾಸಕ, ಸಂಸದರ ಮನೆಗೆ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಸ್ಮಾರ್ಟ್ ಸಿಟಿಯ ಯೋಜನೆಯನ್ನು ಬಿಜೆಪಿ ಶಾಸಕರೇ ಹಾಳು ಮಾಡಿದ್ದಾರೆ. ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಬೆಳಗಾವಿ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಎಷ್ಟು ಒಳ್ಳೆಯ ಕಾಮಗಾರಿ ಮಾಡಿದ್ದಾರೆ ಎಂದು ಸ್ಮಾಟ್೯ ಸಿಟಿ ಎಂಡಿ ಸ್ಪಷ್ಪಡಿಸಲಿ. ಇಲ್ಲ ನಾನು ಕಳಪೆಯಾಗಿರುವುದನ್ನು ಖಚಿತ ಪಡಿಸುತ್ತೇನೆ ಎಂದು ಸವಾಲ್ ಹಾಕಿದರು.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಿಂದ ನಗರದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾಗಳು ನಿಷ್ಕ್ರಿಯಗೊಂಡಿವೆ. ಯಾವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಹುನ್ನಾರವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಡೆಸಿದ್ದಾರೆ. ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಯ ಕುರಿತು ‌ಈಗಾಗಲೇ ಎಸಿಬಿಯಲ್ಲಿ ದೂರು ಸಲ್ಲಿಸಲಾಗಿದೆ ಎಂದರು.

ಜಿಲ್ಲಾಡಳಿತ ಸ್ಟ್ರೀಟ್ ಲೈಟ್ ಕಂಬಗಳನ್ನು ಎಷ್ಟು ಬಾರಿ ಅಳವಡಿಕೆ ಮಾಡಲು ಅವಕಾಶ ಕೊಡುತ್ತದೆ. ಸ್ಮಾರ್ಟ್ ಸಿಟಿ, ಪಾಲಿಕೆ, ಲೋಕೋಪಯೋಗಿ, ಬುಡಾದವರು ವಿನಾಕಾರಣ ಪದೇ ಪದೇ ಸ್ಟ್ರೀಟ್ ಲೈಟ್ ಕಂಬ ಅಳವಡಿಸುತ್ತಾರೆ. ಸ್ಟ್ರೀಟ್ ಲೈಟ್ ಅಳವಡಿಸಿ ನಾಲ್ಕು ವರ್ಷಗಳಿಗೆ ಕಂಬ ತೆಗೆಯುವುದು ಎಷ್ಟು ಸಂಜಸ ಎಂದು ಪ್ರಶ್ನಿಸಿದ ಅವರು, ಫುಟ್ ಫಾತ್ ಮೇಲೆ ಸ್ಟ್ರೀಟ್ ಲೈಟ್ ಅಳವಡಿಕೆ ಮಾಡಿದು ನಾನಾ ಅನುಮಾನಕ್ಕೆ ಕಾರಣವಾಗಿದೆ. ಇದು ಯಾವ ನಾಯಕನ ಮೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ ಎನ್ನುವ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಶಂಕರ ಹೆಗಡೆ, ಪಯಾಜ್ ಅಹ್ಮದ ಸೌದಾಗರ, ಜುನೇದ ಸೈಯದ, ಎಂ.ಕೆ.ಸೈಯದ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Read More Articles