ಗಟ್ಟಿ ಬಸವೇಶ್ವರ ನೀರಾವರಿ ಮಾಡುವ ಮುನ್ನ ಸರಕಾರ ಯೋಚಿಸಲಿ
- 15 Jan 2024 , 2:25 AM
- Belagavi
- 258
ಬೆಳಗಾವಿ: ಗೋಕಾಕ ತಾಲೂಕಿನ ಗಟ್ಟಿ ಬಸವೇಶ್ವರ ಡ್ಯಾಂ ನಿರ್ಮಾಣ ಮಾಡಲು 762 ಕೋಟಿ ರೂ.ಗಳ ಟೆಂಡರ್ ನಿರ್ಮಾಣ ಮಾಡಲು ಕಳೆದ ನಾಲ್ಕು ವರ್ಷ ಕಳೆದರೂ ಪ್ರಾರಂಭವಾಗಿಲ್ಲ. ಸರಕಾರ ಗಟ್ಟಿ ಬಸವೇಶ್ವರ ಡ್ಯಾಂ ನಿರ್ಮಾಣ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು
ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.

ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಗಟ್ಟಿ ಬಸವೇಶ್ವರ ಡ್ಯಾಂ ನಿರ್ಮಾಣ ಮಾಡುವ ಬದಲು ಸರಕಾರ ಗೋಕಾಕ ಹಾಗೂ ಹುಕ್ಕೇರಿ ತಾಲೂಕಿನ ನಡುವೆ ಇರುವ ಧೂಪದಾಳ ಜಲಾಶಯದ ಹೂಳೆತ್ತುವ ಕೆಲಸ ಮಾಡಿದರೆ ಗೋಕಾಕ, ಹುಕ್ಕೇರಿ, ಅರಭಾವಿ, ರಾಯಬಾಗ, ಕುಡುಚಿ, ತೆರದಾಳ, ಬೀಳಗಿ ಸುಮಾರು 9 ಕ್ಷೇತ್ರದಲ್ಲಿ ನೀರಾವರಿ ಯೋಜನೆ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ರೈತರಿಗೆ ಅನಕೂಲವಾಗುತ್ತದೆ ಎಂದರು.

ಸಾವಿರಾರು ರೈತರಿಗೆ ಲಕ್ಷಾಂತರ ಎಕರೆಗಳಿಗೆ ನೀರು ಪೂರೈಸುವ ಜಲಾಶಯವಾಗಿದ್ದು, ಆದ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸರಕಾರ ಕೂಡಲೇ ಧೂಪದಾಳ ಜಲಾಶಯಕ್ಕೆ ಹೂಳೆತ್ತುವ ಕೆಲಸಕ್ಕೆ ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಇಲ್ಲವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಲಾಗುವುದು ಎಂದರು.
ಹನುಮಂತ ಮುಗಳಕೋಡ ಸಾಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










