ಅಥಣಿ ತಾಲೂಕಿನಲ್ಲಿ‌ ಚುಟುಕು ಸಾಹಿತ್ಯದ ಕ್ರಾಂತಿ ಮಾಡಬೇಕಿದೆ : ಅಲಿಬಾದಿ

ಅಥಣಿ : ಮಕ್ಕಳಲ್ಲಿ ಚುಟುಕು ಸಾಹಿತ್ಯದ ರುಚಿ ಹತ್ತಿಸಿ ಅವರಿಂದ ಹೊಸ ಹೊಸ ಚುಟುಕುಗಳನ್ನು ರಚನೆ ಮಾಡುವಂತೆ ಮಾಡಿ, ಚುಟುಕು ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ಕೊಡುವ ಮೂಲಕ ಅಥಣಿ ತಾಲೂಕಿನಲ್ಲಿ ಚುಟುಕು ಕ್ರಾಂತಿ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಅವರು ಹೇಳಿದರು.

promotions

ಅವರು ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಅಥಣಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಥಣಿ ತಾಲೂಕಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ 'ಶಾಲೆಗೊಂದು ಚುಟುಕುಗೋಷ್ಠಿ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

promotions

ಅನಂತರ ಸಾಹಿತಿ ಭಾರತಿ ಅಲಿಬಾದಿ, ಮುಖ್ಯೋಪಾಧ್ಯಾಯರಾದ ಭಾರತಿ ದೊಡಮನಿ, ಶಿವಾನಂದ ಲೋಕುರ ಅವರು ಮಾತನಾಡಿ ಚುಟುಕು ಸಾಹಿತ್ಯ ಮಕ್ಕಳಲ್ಲಿ ಬೆಳೆಸಬೇಕೆಂದರು,ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ ಬಹುಮಾನ ಘೋಷಿಸಿದರು,ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರಾಮಣ್ಣಾ ದೊಡ್ಡನಿಂಗಪ್ಪಗೋಳ ಪ್ರಾಸ್ಥಾವಿಕ ಮಾತನಾಡಿ ಶಾಲೆಗೊಂದು ಚುಟುಕುಗೋಷ್ಠಿ' ಕಾರ್ಯಕ್ರಮದ ಮೂಲಕ ತಾಲೂಕಿನ ಶಾಲಾ ಮಕ್ಕಳಲ್ಲಿ ಚುಟುಕು ಸಾಹಿತ್ಯದ ಅರಿವು ಮೂಡಿಸುವ ಗುರಿ ಹೊಂದಿದೆ ಎಂದು ಹೇಳಿದರು, ಈ ವೇಳೆ ಹಿರಿಯ ಸಾಹಿತಿ ಎಸ್ ಕೆ ಹೊಳೆಪ್ಪನ್ನವರ,ಶಿಕ್ಷಕರಾದ ಟಿ ಎಸ್ ಬಾಗೆನ್ನವರ, ಎಮ್ ಆರ್ ಚೌಗಲಾ, ಎಸ್ ಎಲ್ ಮೇಲ್ಗಡೆ,ಡಾ.ಅರ್ಚನಾ ಅಥಣಿ, ಪತ್ರಕರ್ತರಾದ ಲಕ್ಷ್ಮಣ ಕೋಳಿ, ಆನಂದ‌ ಬಿರಾದಾರ, ಬಸವರಾಜ ಖೆಮಲಾಪೂರ, ಸಿದ್ದಾರೂಢ ಬಣ್ಣದ, ಬಸವರಾಜ ಹಿಪ್ಪರಗಿ ಸೇರಿದಂತೆ ಇತರರಿದ್ದರು, ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶಶಿಧರ್ ಬರ್ಲಿ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ಸೀತವ್ವಾ ಬಳವಾಡ ಪ್ರಥಮ, ಕೃತೀಕಾ ಅವಟಿ ದ್ವಿತೀಯ, ಚಂದಾ ಕಾಂಬಳೆ ತೃತೀಯ, ಸಾಕ್ಷಿ ತೊದಲಬಾಗಿ ಚತುರ್ಥ, ಅಂಜಲಿ‌ ಮಾಳಿ ಪಂಚಮ ಬಹುಮಾನ ಪಡೆದರು, ಒಟ್ಟು 51 ಜನ ಚುಟುಕು ಕವಿಗಳು ಭಾಗವಹಿಸಿದ್ದರು.

ವರದಿ  : ರಾಹುಲ್ 

Read More Articles