2 ದಿನ ನೀರಿನ ವ್ಯತ್ಯಯ ಕಾರಣ ನಾಗರಿಕರಿಗೆ ಸಹಕರಿಸಲು ಕೋರಿದ ಎಲ್ ಅಂಡ್ ಟಿ
- 15 Jan 2024 , 3:31 AM
- Belagavi
- 267
ಬೆಳಗಾವಿ : ಹೆಸ್ಕಾಂ ಮುಖ್ಯ ಲೈನ್‌ನ ವಿದ್ಯುತ್ ಸರಬರಾಜಿನಲ್ಲಿ ಅತಿಯಾದ ಏರಿಳಿತದಿಂದ ಹಿಡಕಲ್ ಹತ್ತಿರ ಕಚ್ಚಾ ನೀರು ಸರಬರಾಜಿನ 1200mm MS ಪೈಪ್‌ಲೈನ್ ನಲ್ಲಿ ನೀರಿನ ಹಿಮ್ಮುಖ ಒತ್ತಡ ಉಂಟಾಗಿ ಮತ್ತೇ ಪೈಪ್ ಹೊಡೆದು ಸೋರಿಕೆ ಉಂಟಾಗಿದ್ದು, ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ .

ಹೆಸ್ಕಾಂ ಮುಖ್ಯ ಲೈನ್‌ನ ವಿದ್ಯುತ್ ಸರಬರಾಜಿನಲ್ಲಿ ಅತಿಯಾದ ಏರಿಳಿತದಿಂದ ಹಿಡಕಲ್ ಹತ್ತಿರ ಕಚ್ಚಾ ನೀರು ಸರಬರಾಜಿನ 1200mm, MS ಪೈಪ್‌ಲೈನ್‌ನಲ್ಲಿ ನೀರಿನ ಹಿಮ್ಮುಖ ಒತ್ತಡ ಉಂಟಾಗಿ ಮತ್ತೇ ಪೈಪ್ ಹೊಡೆದು ಸೋರಿಕೆ ಉಂಟಾಗಿದ್ದು, 10/09/2022 ರಂದು ರಾತ್ರಿ ಇಡೀ ನಿರ್ವಹಣಾ ತಂಡ ತ್ವರಿತವಾಗಿ ವೆಲ್ಡಿಂಗ್‌ನ ದುರಸ್ತಿ ಕಾರ್ಯ ಕೈಗೊಂಡಿರುತ್ತಾರೆ. ಹಾಗೂ ರಾತ್ರಿ ಇಡೀ ದುರಸ್ತಿ ಸಮಯದಲ್ಲಿ ಪಂಪ್‌ಗಳು ಸ್ಥಗಿತಗೊಂಡಿರುತ್ತವೆ. ಕಾರಣ ದಿನಾಂಕ 11/09/2022 ರಂದು ಮತ್ತು 12/09/2022 ರ ಎರಡು ದಿನ ಬೆಳಗಾವಿ ನಗರಕ್ಕೆ 24x7 ಪ್ರಾತ್ಯಕ್ಷಿಕ ವಲಯ ಸಹಿತ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದ್ದು, ಇಂತಹ ಅನಿವಾರ್ಯ ಸಮಯದಲ್ಲಿ ಸಾರ್ವಜನಿಕರು ಎಲ್ & ಟಿ ಯೊಂದಿಗೆ ಸಹಕರಿಸಲು ಕೋರಿದೆ.











