ಟಿಕೆಟ ಫೈಟ್ ಯಾರಿಗುಂಟು ಯಾರಿಗಿಲ್ಲ ಅದೃಷ್ಟ ಲಕ್ಷ್ಮಿ
- Krishna Shinde
- 14 Jan 2024 , 9:55 PM
- Belagavi
- 545
ಬೆಳಗಾವಿ :ಕರ್ನಾಟಕ ವಿಧಾನ ಸಭಾ ಚುನಾವಣೆ ರಂಗೇರುತ್ತಿದ್ದು ಟಿಕೆಟ ಫೈಟ್ ಹೆಚ್ಚಾಗಿದೆ. ನಾಮುಂದೆ ನಿಮುಂದೆ ಎಂದು ಟಿಕೆಟಗಾಗಿ ಕಾದು ಕೂತಿರುವ ಹಲವು ಮುಖಂಡರು ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುವಳು ಎಂದು ಕಾಯುತಿದ್ದಾರೆ.

ಇನ್ನು ಟಿಕೆಟ್ ಫೈನಲ ಮಾಡದ ಆಡಳಿತ ಪಕ್ಷ ಯಾರಿಗೆ ಟಿಕೆಟ ನೀಡುತ್ತೆ ಮತ್ತು ಯಾರಿಗೆ ಕೊಕ ನೋಡುತ್ತೆ ಎಂದು ಇಡಿ ಕರ್ನಾಟಕ ಕಾದು ನೋಡುತ್ತಿದೆ.

ಕೆಲ ನಾಯಕರಿಗೆ ಟಿಕೆಟ್ ಮಿಸ್ ಆಗುವ ಭಯ ಉಂಟಾಗಿದ್ದು ಹೈ ಕಮಾಂಡ ಮೊರೆ ಹೋಗಿದ್ದಾರೆ ಮತ್ತು ಟಿಕೆಟ್ ಸಿಗದ ಅಭ್ಯರ್ಥಿಗಳು ಪಕ್ಷದ ವಿರುದ್ದ ಬಂಡಾಯ ಏಳುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಬೆಳಗಾವಿ ಪಾಲಿಟಿಕ್ಸ್ ಜೋರಾಗಿದ್ದು ಬಿಜೆಪಿ ಜೆಡಿಎಸ್ ಕಾಂಗ್ರೆಸ್ ನಡುವೆ ರೆಡ್ಡಿಯವರ ಕೆಆರಪಿಪಿ ಕೂಡ ನಾ ಯಾರಿಗೂ ಕಮ್ಮಿ ಇಲ್ಲ ಎಂದು ಬೆಳಗಾವಿ ಜನರ ನಡುವೆ ಬೆರೆಯುತ್ತಿದೆ.
ಲೋಕವಿವ ಗ್ರೌಂಡ ರಿಪೋರ್ಟ ಪ್ರಕಾರ ಹೊಸ ಮುಖಗಳಿಗೆ ಒಂದು ಚಾನ್ಸ ಕೊಟ್ಟು ನೋಡೋಣ ಎಂದು ಜನ ಮಾತಾಡಿದ್ದು ಎಲ್ಲವನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ಸದ್ಯದಲ್ಲೇ ಎಲ್ಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿರುವ ಪಕ್ಷಗಳು ಜನ ಮತಕ್ಕಾಗಿ ಹರಸಾಹಸ ಮಾಡುತಿದ್ದಾರೆ.
ಪಕ್ಷದ ಪ್ರಚಾರಕ್ಕಾಗಿ ಡಿಜಿಟಲ್ ಆಡ್ಸ್ ಮೊರೆ ಹೋಗಿರುವ ಪಕ್ಷಗಳು ಗೂಗಲ್ , ಫೇಸ್ಬುಕ್ , ಇನ್ಸ್ಟಾ ,ಟ್ವಿಟ್ಟರ್ ,ಯುಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿ ನಾಗರಿಕರ ಮೊಬೈಲ ಮತ್ತು ಕಂಪ್ಯೂಟರಗಳಲ್ಲಿ ರಾರಾಜಿಸುತ್ತಿದ್ದಾರೆ.
ಒಟ್ಟಾರೆ ಜನ ಮತಕ್ಕಾಗಿ ಮನೆ ಹಾಕಿರುವ ಪಕ್ಷಗಳು ಯಾರಿಗೆ ಟಿಕೆಟ್ ನೀಡಬೇಕೆಂದು ತಿಳಿಯದೆ ಮೇಲಿಂದ ಮೇಲೆ ಸರ್ವೇ ಮಾಡಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ.
ಇವಲ್ಲವನ್ನು ಹುಷಾರಾಗಿ ನೋಡುತ್ತಿರುವ ಸಾಮಾನ್ಯ ಪ್ರಜೆಗಳು ಯಾರಿಗೆ ಜೈ ಪರಾಗ ಮತ್ತು ಯಾರಿಗೆ ಕಿಕ್ ಔಟ್ ಮಾಡ್ತಾರೆ ಅಂತ ಮೇ 13ಕ್ಕೆ ತಿಳಿಯಲಿದೆ.










