ಮಹದಾಯಿ ವಿವಾದ: ಕರ್ನಾಟಕ ಸರ್ಕಾರದ್ ನಿರ್ಲಕ್ಷ್ಯಕ್ಕೆ ಗುಡುಗನಟ್ಟಿ ಕಿಡಿ
- krishna shinde
- 5 Jul 2024 , 2:10 PM
- Belagavi
- 5817
ಬೆಳಗಾವಿ: ಕೇಂದ್ರ ಸರ್ಕಾರದ ನದಿಗಳ ಮೇಲ್ವಿಚಾರಣಾ ಸಮಿತಿಯು ಮಹದಾಯಿ, ಕಳಸಾ ಬಂಡೂರಿ ನದಿಗಳ ವಿವಾದಕ್ಕೆ ಸಂಬಂಧಿಸಿದಂತೆ ಮಂಡಳಿಯನ್ನು ರಚಿಸಿದೆ. ಗೋವಾ ಮುಖ್ಯಮಂತ್ರಿ ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಸಮಿತಿಯ ಸದಸ್ಯರು ಜಾಂಬೋಟಿ ಸೇರಿದಂತೆ ಗಡಿ ಪ್ರದೇಶಗಳ ಪರಿಶೀಲನೆಗೆ ಬರಲಿದ್ದಾರೆಂದು ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ದೀಪಕ್ ಗುಡುಗನಟ್ಟಿ, ಕರ್ನಾಟಕ ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಷಾದನೀಯ,ಕರ್ನಾಟಕ ಸರ್ಕಾರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಸೂಕ್ಷ್ಮತೆಯಿಂದ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಗೋವಾ ಸರ್ಕಾರ ಅಲ್ಲಿನ ಜನತೆಯ ನೀರಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರವು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗುಡುಗನಟ್ಟಿ ಒತ್ತಿ ಹೇಳಿದ್ದಾರೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ಆರಂಭಿಸಬೇಕಾಗಿ ಬರುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಮೂಲಕ ಮಹದಾಯಿ ನದಿಗಳ ವಿವಾದವು ಮತ್ತೆ ಒಂದು ಹಂತಕ್ಕೆ ತಲುಪಿದ್ದು, ಕೇಂದ್ರ , ರಾಜ್ಯ ಮತ್ತು ಸ್ಥಳೀಯ ಆಡಳಿತಗಳು ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.










