ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಹಾಮಾತೆಯ ಪವಾಡ ಅಪರೂಪವಾದದು - ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು

ಬೆಳಗಾವಿ :ಹುಕ್ಕೇರಿ ಹಿರೇಮಠದಲ್ಲಿ ಬೆಂಗಳೂರಿನ ವಿಭೂತಿಪುರ ಸಂಸ್ಥಾನ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು ಪೂಜೆ ಸಲ್ಲಿಸಿ ಮಾತನಾಡಿದ ಶ್ರೀ ಗಳು ನವರಾತ್ರಿ ಆಚರಣೆಗೆ ತನ್ನದೇ ಆದಂತಹ ವಿಶಿಷ್ಟ ಮಹತ್ವವಿದೆ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಹಾಮಾತೆಯ ಪೂಜೆ ಮಾಡುವುದು ಪದ್ಧತಿ ಅದೇ ರೀತಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇ ಭಾಗದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಇ ದೀನ ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದಲ್ಲಿ ದೇವಿ ಪಾರಾಯಣ ಮಾಡಿ ನಮಗೆ ಅತೀವ ಸಂತಸ ತಂದಿದೆ ದೇವಿ ಮಹಾತ್ಮೆ ಸರ್ವರಿಗೂ ದಸರಾ ಹಬ್ಬದ ಶುಭಾಶಯ ಕೋರಿದರು .

promotions


ಸುವಿಚಾರ ಚಿಂತನ ಬಳಗದ ಮಾತೆಯರಿಂದ ದೇವಿ ಪಾರಾಯಣ ನಡೆಯಿತು ಈ ಸಂದರ್ಭದಲ್ಲಿ ಶಾಂತಾ ಸವಡಿ, ಶೈಲಜಾ ಹೋಸಮಠ,ದುಂಡಯ್ಯಾ ಗಣಾಚಾರಿ, ವಿರುಪಾಕ್ಷಯ್ಯ ಹಿರೇಮಠ, ಉಮಾ ಹುಲಿಕಂತಿಮಠ,ಪ್ರೀಯಾ ಸವಡಿ, ನಿರ್ಮಲಾ ನಿಪೆರಿಮಠ, ವಿನಯ್ ಕಲ್ಮಠ ಮುತ್ತು ಹಿರೇಮಠ  ಬೆಳಗಾವಿ ಹುಕ್ಕೇರಿ ಹಿರೇಮಠದ ಸುವಿಚಾರ ಚಿಂತನ ಬಳಗದ ಮಹಿಳೆಯರು ಉಪಸ್ಥಿತರಿದ್ದರು

promotions

Read More Articles