ಮಹಾಪೌರ ಚುನಾವಣೆ ನೂರೆಂಟು ಲೆಕ್ಕಾಚಾರ
- 14 Jan 2024 , 10:13 PM
- Belagavi
- 132
ಬೆಳಗಾವಿ: ಬೆಳಗಾವಿಯ ಮಹಾನಗರ ಪಾಲಿಕೆಯ ಮಹಾಪೌರ, ಉಪಮಹಾಪೌರ ಚುನಾವಣೆ ನಿಗದಿಯಾಗುತ್ತಿದ್ದಂತೆ ಪಾಲಿಕೆಯ ಸದಸ್ಯರಲ್ಲಿ ಮಂದ ಹಾಸ ಮೂಡಿದೆ.
ಸುಮಾರು 16 ತಿಂಗಳ ಹಿಂದೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇದ್ದಿದ್ದರೂ ಮೇಯರ್ ಚುನಾವಣೆ ನಡೆಸದೆ ಪಾಲಿಕೆಗೆ ಆಯ್ಕೆಯಾದ ನಗರ ಸೇವಕರು ಅಂತ್ರದಲ್ಲಿದ್ದರು.

ಮಹಾಪೌರ ಚುನಾವಣೆಯ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪದೇ ಪದೇ ಮಹಾಪೌರ ಚುನಾವಣೆ ನಡೆಸಿದ ಬಗ್ಗೆ ಟಿಕೆ ಮಾಡುತ್ತಿದ್ದರು. ಅನಧಿಕೃತವಾಗಿ ಮಹಾಪೌರ ಮಹಾಪೌರ ಬಿಜೆಪಿ ಸ್ಥಳೀಯ ಶಾಸಕರಿಬ್ಬರೆ ಎಂದು ಹೇಳಿಕೆ ನೀಡಿದ್ದರು. ಅಷ್ಟೆ ಅಲ್ಲದೆ, ಸ್ಥಳೀಯ ಶಾಸಕರಿಬ್ಬರಿಗೆ ಗೌನ್ ಕೊಡುವ ಕಾರ್ಯಕ್ರಮ ಮಾಡುವುದಾಗಿ ಹೇಳಿ ಬಿಜೆಪಿಗೆ ಇರುಸು ಮರುಸು ಉಂಟು ಮಾಡಿದ್ದರು.

ಈಗ ಅಧಿಕೃತವಾಗಿ ನೂತನ ಸದಸ್ಯರು ಫೆ.6 ರಂದು ಮಹಾಪೌರ ಚುನಾವಣೆಯಾದ ಬಳಿಕ ಸದಸ್ಯತ್ವ ಸ್ವೀಕರಿಸಲಿದ್ದಾರೆ.










