ಮೇಕ್ ಇಂಡಿಯಾ ನಂ 1 ಮಿಷನಗೆ ಕರೆ ನೀಡಿದ ದೆಹಲಿ ಸಿ.ಎಂ.ಕೇಜ್ರಿವಾಲ್
- 15 Jan 2024 , 12:50 AM
- Delhi
- 108
ದೆಹಲಿ :ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಿದ ದೆಹಲಿ ಸಿ ಎಂ ಅರವಿಂದ್ ಕೇಜ್ರಿವಾಲ್ ಮೇಕ್ಇಂಡಿಯಾ ನಂ 1 ಮಿಷನಗೆ ಚಾಲನೆ ನೀಡಿದರು ಮತ್ತು ಈ ಮಿಷನ್‌ನೊಂದಿಗೆ 130 ಕೋಟಿ ಜನರನ್ನು ಸಂಪರ್ಕಿಸಬೇಕಾಗಿದೆ ಎಂದು ಹೇಳಿದರು .

ಭಾರತವು ಜಗತ್ತನ್ನು ಮುನ್ನಡೆಸಬಹುದೇ...?
ಇದಕ್ಕೆ ಉತ್ತರಿಸಿದ ಕೇಜ್ರಿವಾಲ್ ಯಾಕಿಲ್ಲ? ಭಾರತ ಏಕೆ ಜಗತ್ತನ್ನು ಮುನ್ನಡೆಸಲು ಸಾಧ್ಯವಿಲ್ಲ?
ಪ್ರತಿಯೊಬ್ಬ ಜಾತಿ-ಧರ್ಮ, ರೈತ-ಕಾರ್ಮಿಕ, ವೈದ್ಯ-ಶಿಕ್ಷಕ ಸೇರಿದಂತೆ ಎಲ್ಲಾ 130 ಕೋಟಿ ಜನರು ಮುಂದೆ ಬಂದು ದೇಶದ ಅಧಿಕಾರವನ್ನು ವಹಿಸಿಕೊಳ್ಳಬೇಕು ಎಂದರು .

ಕೆಲವರಿಗೆ "ಕುಟುಂಬ" ಮುಖ್ಯವಾಗಿರುತ್ತದೆ ಮತ್ತು ಕೆಲವರಿಗೆ ತಮ್ಮ್ "ಸ್ನೇಹಿತರು" ಮುಖ್ಯವಾಗಿರುತ್ತಾರೆ . ಇಂಥಹವರು 75 ವರ್ಷಗಳ ಕಾಲ ತಮ್ಮ ಮನೆ ತುಂಬುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದರು .
ಈಗ ಎಲ್ಲವೂ ದೇಶಕ್ಕಾಗಿ, ಭಾರತಕ್ಕಾಗಿ ಮತ್ತು ಭಾರತದ ಜನರಿಗಾಗಿ ಈಗ ಭಾರತೀಯತೆ ಇರುತ್ತದೆ ಎಂದರು .
130 ಕೋಟಿ ಭಾರತೀಯರು ಒಂದೇ ಕುಟುಂಬ ಎಂದ ಕೇಜ್ರಿವಾಲ್ ನಾವು ಕುಟುಂಬದಂತೆ ಯೋಚಿಸಬೇಕು, ನಾವು ಈ 5 ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು
1. ಪ್ರತಿ ಮಗುವಿಗೆ ಉಚಿತ ಮತ್ತು ಉತ್ತಮ ಶಿಕ್ಷಣ.
2. ಪ್ರತಿ ನಾಗರಿಕರಿಗೆ ಉಚಿತ ಚಿಕಿತ್ಸೆ.
3. ಪ್ರತಿಯೊಬ್ಬ ಯುವಕನಿಗೆ ಉದ್ಯೋಗ .
4. ಪ್ರತಿ ಮಹಿಳೆಗೆ ಗೌರವ ಮತ್ತು ರಕ್ಷಣೆ.
5. ಪ್ರತಿ ರೈತರಿಗೆ ಕೃಷಿಯ ಪೂರ್ಣ ಬೆಲೆ ನೀಡಬೇಕು ಎಂದರು .
ದೇಶದ 130 ಕೋಟಿ ಜನರಿಗೆ ಮನವಿ ಮಾಡಿದ ಕೇಜ್ರಿವಾಲ್ ಭಾರತವನ್ನು ನಂಬರ್-1 ಮಾಡುವ ಈ ರಾಷ್ಟ್ರದ ಮಿಷನ್‌ಗೆ ಸೇರಲು ದೇಶವಾಸಿಗಳಿಗೆ ಕರೆ ನೀಡಿದರು .
ಇದು ಯಾವುದೇ ಪಕ್ಷದ ಧ್ಯೇಯವಲ್ಲ, ಬಿಜೆಪಿ-ಕಾಂಗ್ರೆಸ್ ನವರು ಕೂಡ ಒಂದಾಗಬೇಕು. 75 ವರ್ಷಗಳು ಹೋರಾಟದಲ್ಲಿ ಕಳೆದವು. ಈಗ ನಾವು ಭಾರತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು .
ನಾವು ಪ್ರತಿಜ್ಞೆ ಮಾಡುತ್ತೇವೆ - ನಾವು ಭಾರತವನ್ನು ವಿಶ್ವದ ನಂಬರ್-1 ರಾಷ್ಟ್ರವನ್ನಾಗಿ ಮಾಡುವವರೆಗೆ ನಾವು ಶಾಂತಿಯಿಂದ ವಿಶ್ರಮಿಸುವುದಿಲ್ಲ ಮತ್ತು ದೇಶದ ಮೂಲೆ ಮೂಲೆಗೆ ಹೋಗಿ ದೇಶದ 130 ಕೋಟಿ ಜನರ ಮೈತ್ರಿಕೂಟ ರಚಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು .










